ಲಖನೌ: 'ದ್ವಾಪರ ಯುಗದ ಆರಾಧ್ಯ ದೈವ ಶ್ರೀಕೃಷ್ಣನು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ' ಎಂದು ಉತ್ತರ ಪ್ರದೇಶದ ಮುಸ್ಲಿಂ ಮೌಲ್ವಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಇದರಿಂದ ಕೆರಳಿರುವ ಹಿಂದೂ ಧರ್ಮದ ಸ್ವಾಮೀಜಿಯೊಬ್ಬರು ಮೌಲ್ವಿಯ ನಾಲಿಗೆ ಕತ್ತರಿಸಿ ಕೊಡುವವರಿಗೆ ₹10 ಲಕ್ಷ ಬಹುಮಾನ ನೀಡಲಾಗುವುದು' ಎಂದು ಹೇಳಿದ್ದಾರೆ.
ಇತ್ತೀಚೆಗೆ ಜಾರ್ಖಂಡ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಉತ್ತರ ಪ್ರದೇಶ ಮೂಲದ ಮೌಲ್ವಿ ಮೌಲಾನಾ ಜಾರ್ಜಿಸ್ ಅನ್ಸಾರಿ 'ಹಿಂದೂಗಳು ಪೂಜಿಸುವ ಶ್ರೀಕೃಷ್ಣನು ಇಸ್ಲಾಮಿನ ಪ್ರವಾದಿಯಾಗಿದ್ದರು. ಅವರು ನಿತ್ಯವೂ ನಮಾಜ್ ಮಾಡುತ್ತಿದ್ದರು' ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಸ್ಥಳೀಯ ಪೀಠವೊಂದರ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. 'ಶ್ರೀಕೃಷ್ಣನ ಇತಿಹಾಸ ತಿರುಚುವ ವ್ಯಕ್ತಿಗೆ ತಕ್ಕ ಪಾಠ ಕಲಿಸಬೇಕಿದೆ' ಎಂದು ಹೇಳಿದ್ದಾರೆ.

