ಕಾಸರಗೋಡು: ಕೂಡ್ಲು ಮೀಪುಗುರಿ ಕಾಳ್ಯಂಗಾಡು ದೇವಿಕೃಪಾ ನಿವಾಸಿ ಸೂರ್ಯ ಎಂಬವರ ಪತ್ನಿ ಶ್ಯಾಮಲ (50) ಅವರ ಮೃತದೇಹ ಮನೆ ಕೊಠಡಿಯೊಳಗೆ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯವೆಸಗಿದ್ದಾರೆ. ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಕಳೆದ ಹಲವು ಸಮಯದಿಂದ ಕಾಲು ನೋವಿನಿಂದ ಬಳಲುತ್ತಿದ್ದ ಇವರು ಮಾನಸಿಕ ಖಿನ್ನತೆಯಿಂದ ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ. ಅಸಹಜ ಸಾವಿನ ಬಗ್ಗೆ ನಗರ ಠಾಣೆ ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ.


