ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಸಭೆ ಶಾಲಾ ಗ್ರಂಥಾಲಯ ಸಭಾಂಗಣದಲ್ಲಿ ಜರುಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಉಮೇಶ್ ಕೆ. ಪೆರ್ಲ, ಸಫೀದಾ, ಪ್ರಭಾರ ಮುಖ್ಯ ಶಿಕ್ಷಕ ವೇಣುಗೋಪಾಲ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಎನ್. ಕೇಶವ ಪ್ರಕಾಶ್ ಪ್ರಸ್ತಾವಿಕ ಮಾತುಗಳನ್ನಾಡಿ 2025-26ನೇ ಸಾಲಿನ ವರದಿ ಮಂಡಿಸಿದರು. ಹಿರಿಯ ಶಿಕ್ಷಕ ಕೃಷ್ಣರಾಜ್ ಮಾಸ್ಟರ್ ಲೆಕ್ಕಪತ್ರ ಮಂಡಿಸಿದರು. ಸ್ಟಾಫ್ ಕಾರ್ಯದರ್ಶಿ ಎಸ್. ಕೃಷ್ಣಪ್ರಕಾಶ್, ಕೃಷ್ಣಪ್ರಸಾದ್ ಬನಾರಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪುರಷೋತ್ತಮ ಬಿ.ಎಂ ಅಧ್ಯಕ್ಷ, ಉಮೇಶ್ ಕೆ. ಪೆರ್ಲ ಉಪಾಧ್ಯಕ್ಷ, ಮುಖ್ಯ ಶಿಕ್ಷಕ ಎನ್. ಕೇಶವ ಪ್ರಕಾಶ್ ಕಾರ್ಯದರ್ಶಿ, ಮಾತೃ ಪಿಟಿಎ ಅಧ್ಯಕ್ಷೆ ಸಾಜಿದಾ, ವಿಶ್ವೇಶ್ವರ ಭಟ್ ಪಂಜೆ, ರಾಮಣ್ಣಪೂಜಾರಿ(ಟೈಲರ್), ಉದಯ ಕುಮಾರ್ ಸ್ವರ್ಗ, ಸುಪ್ರಭಾ, ಸಫೀದಾ ಸದಸ್ಯರು, ಶಿಕ್ಷಕರಾದ ಕೃಷ್ಣರಾಜ ಜಿ, ಕೃಷ್ಣ ಪ್ರಕಾಶ್, ಕೃಷ್ಣ ಪ್ರಸಾದ್ ಬಿ, ವಿದ್ಯಾರತ್ನ ಪಿ.ಬಿ, ಗೀತಾಲಕ್ಷ್ಮೀ ಎಸ್ ಹಾಗೂ ಅಕ್ಷತಾ ಬಿ ಅವರನ್ನು ಶಿಕ್ಷಕ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.



