ಪೆರ್ಲ: ಎಣ್ಮಕಜೆ ಪಂಚಾಯಿತಿ ಪೆರ್ಲ ಸನಿಹದ ಬೆದ್ರಂಪಳ್ಳದ ಕ್ವಾಟ್ರಸ್‍ನ ಕೊಠಡಿಯಲ್ಲಿ 7ನೇ ತರಗತಿ ವಿದ್ಯಾರ್ಥಿಯೊಬ್ಬನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂಲತಃ ಪತ್ತನಂತಿಟ್ಟ ಜಿಲ್ಲೆಯ ಅಡೂರು ನಿವಾಸಿ ಪ್ರಕಾಶನ್-ಸುನಿತ ದಂಪತಿಯ ಪುತ್ರ ಶ್ರೀಹರಿ(12)ಮೃತಪಟ್ಟ ಬಾಲಕ. ಇವರು ಕುಟುಂಬ ಸಮೇತ ಬೇದ್ರಂಪಳ್ಳದ ಅಬ್ದುಲ್ಲಕುಞÂ ಎಂಬವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ನಡೆಸುತ್ತಿದ್ದರು.
ಭಾನುವಾರ ಮಧ್ಯಾಹ್ನ ಪೆÇೀಷಕರು ಅಂಗಡಿಗೆ ಸಾಮಾನು ತರಲು ತೆರಳಿದ ವೇಳೆ ಶ್ರೀಹರಿ, ಸಹೋದರ-ಸಹೋದರಿಯಾದ ಪ್ರೀತು ಮತ್ತು ನಿಹಾರಿಕಾ ಅವರೊಂದಿಗೆ ಕ್ವಾರ್ಟರ್ಸ್‍ನಲ್ಲಿ ಆಟವಾಡುತ್ತಿದ್ದರು. ಬಳಿಕ ಪೆÇೀಷಕರು ಮನೆಗೆ ವಾಪಸಾದಾಗ, ಮನೆಯ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು. ಹಲವು ಬಾರಿ ಕೂಗಿ ಕರೆದರೂ, ಬಾಗಿಲು ತೆರೆಯದ ಕಾರಣ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಶ್ರೀಹರಿ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿತ್ತು. ತಪಾಸಣೆ ನಡೆಸಿದಾಗ ಸಾವಿಗೀಡಾಗಿರುವುದು ಖಚಿತಗೊಂಡಿತ್ತು. ತಕ್ಷಣ ಮಾಹಿತಿ ಪಡೆದ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆಉ. ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿಶವಮಹಜರು ನಡೆಸಲಾಯಿತು.
ಶ್ರೀಹರಿ ಬಜ್ಜುತ್ತಡ್ಕ ಎ.ಯು.ಪಿ. ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದನು. ಪ್ರಕರಣದ ಕುರಿತು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.



