HEALTH TIPS

ಒಮಾನ್, ಕುವೈತ್‌ಗೆ ವಿಮಾನ ಸಂಚಾರ ಪುನಾರಂಭ : ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಣೆ

 ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ಕೆಲವು ಪ್ರದೇಶಗಳಿಗೆ ತನ್ನ ಸೇವೆಯನ್ನು ಸ್ಥಗಿತಗೊಳಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಒಮಾನ್ ಮತ್ತು ಕುವೈತ್‌ಗೆ ವಿಮಾನಗಳ ಹಾರಾಟವನ್ನು ಪುನಾರಂಭಿಸುವುದಾಗಿ ಗುರುವಾರ ಪ್ರಕಟಿಸಿದೆ. 


ಪ್ರಸ್ತುತ ಟಾಟಾ ಸಮೂಹದ ಒಡೆತನದ ಈ ವಿಮಾನ ಯಾನ ಸಂಸ್ಥೆ ಭಾರತ ಮತ್ತು ಪಶ್ಚಿಮ ಏಷ್ಯಾದ ನಡುವೆ ವಾರಕ್ಕೆ ಸುಮಾರು 780 ವಿಮಾನಗಳ ಹಾರಾಟವನ್ನು ನಿರ್ವಹಿಸುತ್ತಿದೆ. ಇದು ಭಾರತದ 18 ನಗರಗಳನ್ನು ಪಶ್ಚಿಮ ಏಷ್ಯಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಒಮಾನ್‌ನ ಸಲಾಲಾಹ್ ಮತ್ತು ಕುವೈತ್‌ಗೆ ವಿಮಾನ ಸೇವೆಗಳನ್ನು ಪುನಾರಂಭಿಸುವುದರೊಂದಿಗೆ ಪಶ್ಚಿಮ ಏಷ್ಯಾದ ಎಲ್ಲಾ ಸ್ಥಳಗಳಿಗೆ ವಿಮಾನ ಸಂಚಾರವನ್ನು ಮರು ಆರಂಭಿಸಲಾಗಿದೆ ಎಂದು ವಿಮಾನ ಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೋಝಿಕ್ಕೋಡ್-ಸಲಾಹ್ ಮಾರ್ಗದ ವಿಮಾನಗಳ ಸಂಚಾರ ಜುಲೈ 2ರಿಂದ, ಕೋಝಿಕ್ಕೋಡ್ ಮತ್ತು ಕುವೈತ್ ನಡುವಿನ ವಿಮಾನ ಸೇವೆಗಳು ಜುಲೈ 3ರಿಂದ, ಬೆಂಗಳೂರು ಮತ್ತು ಕುವೈತ್ ನಡುವಿನ ವಿಮಾನಗಳ ಸಂಚಾರ ಜುಲೈ 4ರಿಂದ ಪುನಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೇಳಿದೆ.

100ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರತಿ ದಿನ 500ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ನಿರ್ವಹಿಸುತ್ತಿದೆ. ಆ ಮೂಲಕ 43 ದೇಶೀಯ ಮತ್ತು 16 ಅಂತರ ರಾಷ್ಟ್ರೀಯ ಸ್ಥಳಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. 


 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries