ಕುಂಬಳೆ: ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಸೀತಾಂಗೋಳಿ ಎಡನಾಡು ಸಹಕಾರಿ ಬ್ಯಾಂಕ್ ಸಮೀಪದ ನಿವಾಸಿ ರಾಮಕೃಷ್ಣ ಎಂಬವರ ಪತ್ನಿ ಎಂ. ಸುನಿತಾ (48)ಸಾವಿಗೀಡಾದವರು. ಕುಂಬಳೆ ಸನಿಹದ ಮುಜಂಗಾವಿನ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ಬುಧವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ವಿಶ್ರಾಂತಿಗೆ ತೆರಳಿದ್ದ ಸುನಿತಾ ಅವರು, ಗುರುವಾರ ಬೆಳಗ್ಗೆ ಮನೆಯಲ್ಲಿ ಕಾಣಿಸದಿದ್ದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ಆರಂಭಿಸಿದ್ದು, ಪತ್ತೆಯಾಗದ ಹಿನ್ನೆಲೆಯಲ್ಲಿ ಕುಂಬಳೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೆÇಲೀಸರು ತನಿಖೆ ನಡೆಸುತ್ತಿರುವ ಮಧ್ಯೆ ಮುಜಂಗಾವು ದೇವಾಲಯ ಸನಿಹದ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಕುಂಬಳೆ ಪೆÇಲೀಸ್ ಠಾಣೆ ಉಪನಿರೀಕ್ಷಕ ಕೆ.ಪಿ. ಗಣೇಶನ್ ನೇತೃತ್ವದ ಪೊಲೀಸರ ತಂಡ, ಕಾಸರಗೋಡು ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ನೆರವಿನಿಂದ ಮೃತದೇಹ ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು.
ಸುನಿತಾ ಅವರು ಪತಿ ರಾಮಕೃಷ್ಣ ರೈ ಅವರೊಂದಿಗೆ ವಾಸಿಸುತ್ತಿದ್ದು, ಇವರ ಏಕ ಪುತ್ರ ಧನುಷ್ ಕುಮಾರ್ ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದಾರೆ.
ಕುಂಬಳೆ ಠಾಣೆ ಪೆÇಲೀಸರು ಅಸಹಜ ಸಾವಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



