ಕಾಸರಗೋಡು: ಬೀದಿ ನಾಯಿ ಅಡ್ಡ ಓಡಾಡಿದ ಪರಿಣಾಮ ನಿಯಂತ್ರಣ ತಪ್ಪಿದ ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಮಡಿಕ್ಕೆ ಕೀಕ್ಕಾನಕೋಟೆ ನಿವಾಸಿ ಎಂ.ಎಸ್. ಮೋಹನನ್ (58) ಮೃತಪಟ್ಟವರು. ಕಾಞಂಗಾಡು ಪುದಿಯಕೋಟೆಯಲ್ಲಿ ಅಪಘಾತ ನಡೆದಿದೆ.
ಆಟೋರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಮೋಹನನ್ ಅಲಾಮಿಪಳ್ಳಿ ಆಟೋರಿಕ್ಷಾ ನಿಲ್ದಾಣದ ಚಾಲಕರಾಗಿದ್ದರು.
ಅಲಾಮಿಪಳ್ಳಿಯಿಂದ ಪ್ರಯಾಣಿಕರನ್ನು ಕಾಞಂಗಾಡ್ ನಗರಕ್ಕೆ ಕರೆದೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಹೊಸಕೋಟೆ ಇಂಡಿಯನ್ ಕಾಫಿ ಹೌಸ್ ಮುಂಭಾಗಕ್ಕೆ ತಲುಪಿದಾಗ ಬೀದಿ ನಾಯಿ ಆಟೋರಿಕ್ಷಾಕ್ಕೆ ಅಡ್ಡವಾಗಿ ಏಕಾಏಕಿ ಸಂಚರಿಸಿದ್ದು, ನಾಯಿಯನ್ನು ಅಪಘಾತದಿಂದ ರಕ್ಷಿಸುವ ಯತ್ನದಲ್ಲಿ ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.

