ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಪೊಡಿಪ್ಪಳದ ಯೋಗೀಶ್ ಎಂಬವರ ಮನೆ ಬುಧವಾರ ಸುರಿದ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಬುಧವಾರ ಹಂಚು ಹಾಸಿದ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿಯಿತು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಭಾರೀ ಅನಾಹುತ ತಪ್ಪಿದೆ. ಮನೆ ಕುಸಿತದಿಂದ ಭಾರೀ ನಾಶನಷ್ಟ ಉಂಟಾಗಿದೆ.
ಘಟನೆಯ ಬಳಿಕ ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ಎನ್., ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ., ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಸುರೇಶ್, ಭಾಸ್ಕರ ಪೊಡಿಪ್ಪಳ ಮುಂತಾದವರು ತೆರಳಿ ವಿಚಾರಿಸಿದರು. ಓಣಂ ಹಬ್ಬದಂಗವಾಗಿ ಸರ್ಕಾರಿ ರಜೆಯಾದ್ದರಿಂದ ಆ ಬಳಿಕ ಗ್ರಾಮಾಧಿಕಾರಿಗಳು ಆಗಮಿಸಿ ವರದಿ ನೀಡುವುದಾಗಿ ತಿಳಿಸಿದ್ದಾರೆ.

.jpg)
