ರಾಯ್‌ಬರೇಲಿ: 'ಭಾರತದ ಪರಂಪರೆಯನ್ನು ಖಂಡಿಸುವುದು ಕಾಂಗ್ರೆಸ್ ಜನ್ಮಸಿದ್ಧ ಹಕ್ಕಾಗಿದೆ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
1857ರ ದಂಗೆಯಲ್ಲಿ ಭಾಗಿಯಾಗಿದ್ದ ರಾಣಾ ಬೇಣಿ ಮಾಧವ್ ಬಕ್ಷ್ ಸಿಂಗ್ ಅವರ 222ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಯೋಗಿ ಆದಿತ್ಯನಾಥ್, 'ರಾಹುಲ್ ಗಾಂಧಿ ಅವರು 'ಮನುಸ್ಮೃತಿ' ಕುರಿತಂತೆ ಹೇಳಿಕೆ ನೀಡುತ್ತಾರೆ.
ದೇಶವು ನಿಮ್ಮಿಂದ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ಆದರೆ, ಸಂಸತ್ತಿನ ವಿರೋಧ ಪಕ್ಷದ ನಾಯಕನಾಗಿ ನಿಮ್ಮ ಜವಾಬ್ದಾರಿಯನ್ನು ಮರೆಯಬಾರದು. ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಬಳಿಕ ಭಾರತದ ಸಂಪ್ರದಾಯ, ಪರಂಪರೆಯನ್ನು ಖಂಡಿಸುತ್ತಾರೆ. ವಿದೇಶಕ್ಕೆ ಹೋಗುತ್ತಿದ್ದಂತೆ ದೇಶ ಕುರಿತು ಅವಮಾನ ಮಾಡುತ್ತಾರೆ' ಎಂದು ಆರೋಪಿಸಿದ್ದಾರೆ.
ಮನುಸ್ಮೃತಿ, ರಾಮ, ಭಾರತದ ಪರಂಪರೆಯನ್ನು ಕಾಂಗ್ರೆಸ್ ಪ್ರಶ್ನಿಸುತ್ತದೆ. ಅಥರ್ವವೇದ, ಮತ್ಸ್ಯ ಪುರಾಣಗಳನ್ನು ಓದುವುದರಿಂದ ನಿಮಗೆ ಬೇಕಾದ ಮಾಹಿತಿ ಸಿಗಬಹುದು. ಶನಿವಾರ ಪುಣೆಯಲ್ಲಿ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಜೊತೆಯಲ್ಲಿ ಸಂವಾದ ನಡೆಸಿದ್ದರು. ಆ ವೇಳೆ ಅವರು ಮನುಸ್ಮೃತಿ, ಪಿತೃ ಪ್ರಧಾನ ಸಮಾಜ ಕುರಿತು ಟೀಕಿಸುವ ಇವರ ಉದ್ದೇಶ ಏನೂ ಎಂಬುವುದು ತಿಳಿಯುತ್ತಿಲ್ಲ' ಎಂದು ಹೇಳಿದ್ದಾರೆ.
ಇತ್ತೀಚೆಗೆ ಜಂತರ್ ಮಂತರ್ ಪ್ರತಿಭಟನೆ ಬಳಿಕ ಒಬ್ಬ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ ಅವರ ಪೋಷಕರು ಕ್ಷಮೆ ಕೇಳಿದ್ದಾರೆ. ಯಾರೊದ್ದೊ ಪ್ರಭಾವದಿಂದ ಆ ಬಾಲಕಿ ಆ ರೀತಿಯ ಶಬ್ದಗಳನ್ನು ಬಳಸಿರಬಹುದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ರಾಹುಲ್ ಅವರು ಎಲ್ಲಿ ಹೋದರೂ ಮೋದಿ ಅವರ ಬಗ್ಗೆ ಟೀಕೆ ಮಾಡುತ್ತಾರೆ. ಇದು ಕೇವಲ ಮೋದಿಗೆ ಮಾಡುವ ಅವಮಾನವಲ್ಲ. ಬದಲಾಗಿ ಇಡೀ ದೇಶವನ್ನೇ ಅವಮಾನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವು ಅವರ ಅಧಿಕಾರ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿ, ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

