ಮುಳ್ಳೇರಿಯ: ಮುಳಿಯಾರು ಪಂಚಾಯಿತಿ ಮಜಕಾರ್ ನಿವಾಸಿ ಡಿ. ಮಹಾಲಿಂಗ ಪಾಟಾಳಿ ಎಂಬವರ ಪುತ್ರ ಯೋಗೀಶ್ ಕುಮಾರ್ (40)ಅವರ ಮೃತದೇಹ, ಇವರು ನೂತನವಾಗಿ ನಿರ್ಮಿಸಿದ ಮನೆಯ ಶೆಡ್‍ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಸರಗೋಡು-ಸುಳ್ಯ ರೂಟ್‍ನಲ್ಲಿ ಸಂಚರಿಸುವ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಯೋಗೀಶ್ ಕುಮಾರ್ ತಾತ್ಕಾಲಿಕ ನೆಲೆಯಲ್ಲಿ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಇತ್ತೀಚೆಗೆ ಹೊಸ ಮನೆಯ ನಿರ್ಮಾಣ ಕೆಲಸ ಪೂರ್ಣಗೊಳಿಸಿ ಅಲ್ಲಿ ವಾಸ ಆರಂಭಿಸಿದ್ದರು. ವಿವಾಹದ ಸಿದ್ಧತೆ ನಡೆಸುತ್ತಿದ್ದಂತೆಯೇ ಯೋಗೀಶ್ ಕುಮಾರ್ ಸಾವಿಗೆ ಶಣಾಗಿದ್ದಾರೆ. ಯೋಗೀಶ್ ಹಾಗೂ ತಾಯಿ ಬೇಬಿ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು. 18 ವರ್ಷಗಳಿಂದ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ತಾತ್ಕಾಳಿಕ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ತಾತ್ಕಾಲಿಕ ನೆಲೆಯಲ್ಲಿಕೆಲಸ ನಿರ್ವಹಿಸುತ್ತಿರುವ ನಿರ್ವಾಹಕರನ್ನು ಕೆಲಸದಿಂದ ಹೊರತುಪಡಿಸುವ ವದಂತಿ ಹಿನ್ನೆಲೆಯಲ್ಲಿ, ಕೆಲಸ ನಷ್ಟಗೊಳ್ಳಬಹುದೆಂಬ ಭೀತಿಯಿಂದ ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ.

