ಕಾಸರಗೋಡು: ಕಾರಡ್ಕ ನಿವಾಸಿಯಾಗಿರುವ ಗೃಹಿಣಿಯೊಬ್ಬರ ಮೃತದೇಹ ಆವರಗೋಡೆಯಲ್ಲದ ಬಾವಿಯಲ್ಲಿ ಪತ್ತೆಯಾಗಿದೆ. ಮಡಿಕ್ಕೆ ಚಾಳಕಡವ್ ಆಯುರ್ವೇದ ಆಸ್ಪತ್ರೆ ಸಮೀಪದ ನಿವಾಸಿ ಆಟೋ ಚಾಲಕ ಸುರೇಂದ್ರನ್ ಎಂಬವರ ಪತ್ನಿ ಸರಳ (46) ಮೃತಪಟ್ಟವರು.
ಬಾವಿಯ ಒಂದು ಭಾಗ ಕುಸಿದ ಸ್ಥಿತಿಯಲ್ಲಿದ್ದು, ತೋಟದ ಬಳಿ ಇರುವ ಭಾವಿಯ ಪರಿಸರದಲ್ಲಿ ಚಪ್ಪಲಿ ಕಂಡ ಹಿನ್ನೆಲೆಯಲ್ಲಿ ನಡೆಸಿದ ಹುಡುಕಾಟದ ಮಧ್ಯೆ ಗೃಹಿಣಿ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆಯ ತಪ್ಪಿ ಬಿದ್ದಿರಬೇಕೆಂದು ಶಂಶಯಿಸಲಾಗಿದೆ. ಅಗ್ನಿಶಾಮಕದಳ ಮತ್ತು ಪೆÇಲೀಸರು ಸ್ಥಳಕ್ಕಾಗಮಿಸಿ, ಗೃಹಿಣಿಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.


