HEALTH TIPS

ಎನ್‌ಎಸ್‌ಇ ಐಪಿಒಗೆ ಒಪ್ಪಿಗೆ

ನವದೆಹಲಿ (PTI): ದೇಶದ ಷೇರು ಮಾರುಕಟ್ಟೆಯಲ್ಲಿ ಇದುವರೆಗಿನ ಅತಿದೊಡ್ಡ ಐಪಿಒ (ಸಾರ್ವಜನಿಕರಿಗೆಷೇರು ಮಾರಾಟ) ಎಂದೇ ವಿಶ್ಲೇಷಿಸಲಾಗುತ್ತಿರುವ, ರಾಷ್ಟ್ರೀಯ ಷೇರುವಿನಿಮಯ ಕೇಂದ್ರದ (ಎನ್‌ಎಸ್‌ಇ) ₹30 ಸಾವಿರ ಕೋಟಿ ಮೊತ್ತದ ಐಪಿಒಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಶುಕ್ರವಾರ ಒಪ್ಪಿಗೆ ನೀಡಿದೆ.


ಐಪಿಒದೊಂದಿಗೆ ಮುಂದುವರಿ ಯಲು ಅನುಮತಿ ನೀಡುವ ವೀಕ್ಷಣಾ ಪತ್ರವನ್ನು ಎನ್‌ಎಸ್‌ಇಗೆ ಸೆಬಿ ನೀಡಿದೆ. ಕಂಪನಿಯು ಜೂನ್‌ ತಿಂಗಳಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿತ್ತು. ಸೆಬಿ ಅನುಮೋದನೆ ಲಭಿಸಿರು ವುದರಿಂದ ಎನ್‌ಎಸ್‌ಇ ಷೇರುಗಳನ್ನು ಮಾರಾಟ ಮಾಡಲು ಅಗತ್ಯ ಸಿದ್ಧತೆ ಕೈಗೊಳ್ಳಬಹುದಾಗಿದೆ.

ಮುಂದಿನ ವಾರ ಎನ್‌ಎಸ್‌ಇ ಐಪಿಒ ಬೆಲೆ ಮತ್ತು ಇತರ ಪ್ರಮುಖ ವಿವರಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಸೆಪ್ಟೆಂಬರ್‌ 15ರಂದು ಸಾರ್ವಜನಿಕರಿಗೆ ಷೇರುಗಳ ಮಾರಾಟ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಎನ್‌ಎಸ್‌ಇಯ ಆಫರ್‌ ಫಾರ್ ಸೇಲ್ ಮೂಲಕ 14.89 ಕೋಟಿ ಷೇರುಗಳನ್ನು ಮಾರಾಟ ಮಾಡಲಿದೆ. ಇದರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ 2.48 ಕೋಟಿ, ಎಂಎಸ್‌ ಸ್ಟ್ರಾಟಜಿಕ್‌ (ಮಾರಿಷಸ್) ಲಿಮಿಟೆಡ್‌ನ 1.60 ಕೋಟಿ ಷೇರುಗಳು ಸೇರಿವೆ. ಎನ್‌ಎಸ್‌ಇಯಲ್ಲಿ ಶೇ 10.72ರಷ್ಟು ಪಾಲು ಹೊಂದಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಯಾವುದೇ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ.

2016ರಲ್ಲಿ ಎನ್‌ಎಸ್‌ಇ ₹10 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮೊದಲ ಬಾರಿಗೆ ಐಪಿಒಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ಸೆಬಿ ಆಡಳಿತಾತ್ಮಕ ಕಾರಣ ನೀಡಿ, ಒಪ್ಪಿಗೆ ನೀಡಿರಲಿಲ್ಲ.

2024ರ ಅಕ್ಟೋಬರ್‌ನಲ್ಲಿ ಹುಂಡೈ ಮೋಟರ್ ಇಂಡಿಯಾ ಕಂಪನಿಯು ಐಪಿಒ ಮೂಲಕ ₹27,870 ಕೋಟಿ ಬಂಡವಾಳ ಸಂಗ್ರಹಿಸಿತ್ತು. ಇದು ಇದುವರೆಗಿನ ಅತಿದೊಡ್ಡ ಐಪಿಒ ಆಗಿದೆ. ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ಜಿಯೊ ಪ್ಲಾಟ್‌ ಫಾರ್ಮ್ಸ್‌ಗೆ ಐಪಿಒ ಮೂಲಕ ₹37,700 ಕೋಟಿ ಬಂಡವಾಳ ಸಂಗ್ರಹಿಸಲು ಸೆಬಿ ಇತ್ತೀಚೆಗೆ ಅನುಮತಿ ನೀಡಿದೆ. ಆದರೆ, ಈ ಐಪಿಒ ಬಿಡುಗಡೆಯ ಸಮಯ ಇನ್ನೂ ಘೋಷಣೆಯಾಗಿಲ್ಲ.

ಮಣಿಪಾಲ್ ಪೇಮೆಂಟ್ ಐಪಿಒ 9ಕ್ಕೆ

ನವದೆಹಲಿ (ಪಿಟಿಐ): ಮಣಿಪಾಲ್ ಪೇಮೆಂಟ್ ಆಯಂಡ್ ಐಡೆಂಟಿಟಿ ಸಲ್ಯೂಷನ್ಸ್‌ ಲಿಮಿಟೆಡ್‌, ಐಪಿಒ ಮೂಲಕ ₹805 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ.

ಪ್ರತಿ ಷೇರಿನ ಬೆಲೆ ₹322ರಿಂದ ₹339ಕ್ಕೆ ನಿಗದಿಪಡಿಸಿದೆ. ಷೇರು ಮಾರಾಟ ಪ್ರಕ್ರಿಯೆ ಸೆಪ್ಟೆಂಬರ್ 9ರಿಂದ 11ರವರೆಗೆ ನಡೆಯಲಿದೆ. ಆಯಂಕರ್ ಇನ್‌ವೆಸ್ಟರ್ಸ್‌ (ಆರಂಭಿಕ ಹೂಡಿಕೆದಾರರು) ಸೆಪ್ಟೆಂಬರ್ 8ರಂದು ಅರ್ಜಿ ಸಲ್ಲಿಸಬಹುದಾಗಿದೆ.

ಈಕ್ವಿಟಿ ಷೇರುಗಳ ಮಾರಾಟದಿಂದ ₹320 ಕೋಟಿ ಮತ್ತು ಆಫರ್ ಫಾರ್ ಸೇಲ್‌ನಿಂದ (ಒಎಫ್‌ಎಸ್‌) ₹485 ಕೋಟಿ ಸಂಗ್ರಹಿಸಲಿದೆ. ಈ ಬಂಡವಾಳವನ್ನು ವಿವಿಧ ಉಪಕರಣಗಳ ಖರೀದಿ, ವಹಿವಾಟು ವಿಸ್ತರಣೆಗೆ ಬಳಸಿಕೊಳ್ಳಲಾಗುವುದು ಎಂದು ಕಂಪನಿ ಶುಕ್ರವಾರ ತಿಳಿಸಿದೆ.

ಕಳೆದ ವರ್ಷದ ಜೂನ್‌ನಲ್ಲಿ ಕಂಪನಿಯು ಸೆಬಿಗೆ ಐಪಿಒಗೆ ಸಂಬಂಧಿಸಿದ ಕರಡು ದಾಖಲೆಗಳನ್ನು ಸಲ್ಲಿಸಿತ್ತು. ಡಿಸೆಂಬರ್‌ನಲ್ಲಿ ಸೆಬಿ ಒಪ್ಪಿಗೆ ನೀಡಿತ್ತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries