ಕೋಲ್ಕತ್ತ: ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಕಲ್ಲಿದ್ದಲು ಗಣಿಯ ನೆಲದಡಿಯಲ್ಲಿ ಸಿಲುಕಿದ್ದ 14 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಯಾವುದೇ ಸಾವು-ನೋವು ಉಂಟಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ 'ಕುಮಾರ್ಡಿಹಿ-ಎ' ಭೂಗತ ಗಣಿಯ ರಾಟೆ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಸೋಮವಾರ ಈ ಘಟನೆ ಸಂಭವಿಸಿದೆ.
ಗಣಿ ಕಾರ್ಮಿಕರನ್ನು ಕರೆದೊಯ್ಯಲು ಬಳಸುತ್ತಿದ್ದ ಲಿಫ್ಟ್‌ನ ಹಗ್ಗವು ಜಾರಿದ ಕಾರಣ ಸುಮಾರು 50 ಮೀಟರ್ ಆಳದಲ್ಲಿ ಎರಡು ಲಿಫ್ಟ್ ಪಂಜರಗಳಲ್ಲಿ ಕಾರ್ಮಿಕರು ಸಿಲುಕಿದ್ದರು.


