HEALTH TIPS

ಗ್ರಾಮೀಣ ಮಹಿಳೆಯರಿಗೆ ಉಚಿತ ಗೋವು: ₹57 ಕೋಟಿ ಮಂಜೂರು

ಚೆನ್ನೈ: ಗ್ರಾಮೀಣ ಭಾಗದ 10,000 ಅರ್ಹ ಮಹಿಳೆಯರಿಗೆ ಉಚಿತವಾಗಿ ಗೋವುಗಳನ್ನು ವಿತರಿಸುವ ಸಲುವಾಗಿ ತಮಿಳುನಾಡು ಸರ್ಕಾರವು ₹57 ಕೋಟಿ ಮಂಜೂರು ಮಾಡಿದೆ. 2026-2027ನೇ ಆರ್ಥಿಕ ವರ್ಷದ ಆಯವ್ಯಯದಲ್ಲಿ ಸರ್ಕಾರ ಈ ಅನುದಾನವನ್ನು ಘೋಷಿಸಿತ್ತು.


ಗ್ರಾಮೀಣ ಮಹಿಳೆಯರ ಜೀವನೋ‍ಪಾಯಕ್ಕೆ ಒತ್ತಾಸೆಯಾಗುವುದರ ಜತೆಗೆ ರಾಜ್ಯದಲ್ಲಿ ಹಾಲು ಉತ್ಪಾದನಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದೊಂದಿಗೆ ಈ ಯೋಜನೆ ರೂಪಿಸಿ, ಅನುದಾನ ನೀಡಲಾಗಿದೆ ಎಂದೂ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಸರ್ಕಾರದ ಈ ಕ್ರಮವು ವೈಜ್ಞಾನಿಕ ಹೈನುಗಾರಿಕಾ ಪದ್ಧತಿ ಹಾಗೂ ಸರಿಯಾದ ಪಶುಸಂಗೋಪನೆ ನಿರ್ವಹಣೆಯನ್ನು ಉತ್ತೇಜಿಸುವುದರ ಜತೆಗೆ ಪ್ರತಿ ಕುಟುಂಬದ ಪೌಷ್ಟಿಕಾಂಶ ಭದ್ರತೆ, ಆರ್ಥಿಕ ಸ್ವಾತಂತ್ರ್ಯದ ಮೂಲಕ ಮಹಿಳಾ ಸಬಲೀಕರಣವನ್ನು ಖಾತರಿಪಡಿಸಿಕೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೇ, ಸರಿಯಾದ ಆರೈಕೆ, ನಿರ್ವಹಣೆಯ ಮೂಲಕ ‍ಪ್ರತಿ ಗೋವು ಐದು ವರ್ಷಗಳ ಅವಧಿಯಲ್ಲಿ ಮೂರರಿಂದ ನಾಲ್ಕು ಕರುಗಳನ್ನು ಹಾಕಬಲ್ಲದು. ಇದರಿಂದಾಗಿ ಗ್ರಾಮೀಣ ಸಮುದಾಯಗಳಲ್ಲಿ ನಿರಂತರ ಆರ್ಥಿಕ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries