₹16,520 ನಗದು ವಶಪಡಿಸಿಕೊಂಡ ಕುಂಬಳೆ ಪೊಲೀಸರು
ಕುಂಬಳೆ: ಕುಂಬಳೆ ಕುಂಟಂಗೇರಡ್ಕದ ಎಚ್ಆರ್ಡಿ ಕಾಲೇಜು ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಐವರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಠಾಣೆಯ ಎಸ್ಐ ಸಂತೋಷ್ ವಿ.ವಿ. ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದೆ. ಈ ಸಂದರ್ಭದಲ್ಲಿ ಜೂಜಾಟಕ್ಕೆ ಬಳಸಲಾಗಿದ್ದ ₹16,520 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಉಳ್ಳಾಲ ಮುಕ್ಕಚ್ಚೇರಿಯ ಇಮ್ತಿಯಾಜ್ (43), ಕೊಯಿಪ್ಪಾಡಿ ಬದ್ರಿಯಾನಗರದ ಅಬೂಬಕ್ಕರ್ ಸಿದ್ದಿಕ್ (35), ಉಪ್ಪಿನಂಗಡಿ ಕರಾಯ ನಿವಾಸಿ ನೌಶಾದ್ ಯು.ಬಿ. (40), ಉಪ್ಪಿನಂಗಡಿ ರಾವ್ನಗರದ ಮಂಜುನಾಥ ಶೆಟ್ಟಿ (45) ಹಾಗೂ ಸೋಮೇಶ್ವರದ ಮೊಹಮ್ಮದ್ ಹಾರಿಸ್ (42) ಎಂದು ಗುರುತಿಸಲಾಗಿದೆ.
ಈ ಸಂಬಂಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

