HEALTH TIPS

ತಳಂಗರೆಯಲ್ಲಿ ವ್ಯಕ್ತಿಯ ಕೊಲೆ: ಎಲ್ಲ ಆರೋಪಿಗಳ ಬಂಧನ

 ಕಾಸರಗೋಡು: ತಳಂಗರೆಯ ಕಡವತ್‌ನ ಕಟ್ಟಡವೊಂದರಲ್ಲಿ ಯುವಕನ ಕತ್ತು ಹಿಸುಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಕರ್ನಾಟಕದ ನಿವಾಸಿ ಅಫ್ರೀದ್ ಖಾನ್ (24), ಆತನ ಸಹಚರರಾದ ವಿನೋದ್ ರಾಜಾರಾಮ್ ಕಾಂಬ್ಳೆ (36) ಹಾಗೂ ಅಮೃತ್ ಬೋಳಿ ಶೆಟ್ಟಿ (33) ಬಂಧಿತರು.

ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ಗುರುತಿಸುವ ಪರೇಡ್ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಕರ್ನಾಟಕದ ದಾವಣಗೆರೆ ನಿವಾಸಿ ನಜೀಮುಲ್ಲಾ (50) ಅವರನ್ನು ಹಣಕಾಸಿನ ವ್ಯವಹಾರದ ನೆಪದಲ್ಲಿ ಮದ್ಯಪಾನಕ್ಕೆ ಆಹ್ವಾನಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆಗೈದಿರುವುದಾಗಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ನಜೀಮುಲ್ಲಾ ಹಾಗೂ ಇತರ ಮೂವರು ಆರೋಪಿಗಳು ಬೆಂಗಳೂರಿನಲ್ಲಿ ಪರಸ್ಪರ ಪರಿಚಯವಾಗಿದ್ದರು. ಬಳಿಕ ಅಕ್ಟೋಬರ್ ಮೊದಲ ವಾರದಲ್ಲಿ ತಳಂಗರೆಗೆ ಬಂದಿದ್ದ ತಂಡ, ಕಡವತ್‌ನ ಕಟ್ಟಡವೊಂದರ ಮೇಲಂತಸ್ತಿನಲ್ಲಿ ಬಾಡಿಗೆ ಕೊಠಡಿ ಪಡೆದುಕೊಂಡಿತ್ತು.

ನಜೀಮುಲ್ಲಾ ಅವರನ್ನು ಕೊಲೆಗೈದ ಬಳಿಕ ಕೊಠಡಿಯ ಬಾಗಿಲು ಮುಚ್ಚಿ ಆರೋಪಿಗಳು ಪರಾರಿಯಾಗಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries