HEALTH TIPS

ಚೋಟಾನಿಕ್ಕರ ದೇವಿ ಸನ್ನಿಧಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಕುಟುಂಬ ಸಮೇತ ಭೇಟಿ; ಕೇರಳ ಹೈಕೋರ್ಟ್ ಸಿಜೆ ಸಾಥ್

 ದೇವಸ್ಥಾನದ ಪೂರ್ವ ನಡಪ್ಪಂದಲ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಕೊಚ್ಚಿನ್ ದೇವಸ್ವಂ ಮಂಡಳಿಯಿಂದ ಗೌರವ ಸನ್ಮಾನ

ಕೊಚ್ಚಿ: ಕೇರಳದ ಸುಪ್ರಸಿದ್ಧ ಚೋಟಾನಿಕ್ಕರ ಭಗವತಿ ದೇವಾಲಯಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ಭಾನುವಾರ ಬೆಳಿಗ್ಗೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 


ಬೆಳಿಗ್ಗೆ ಸುಮಾರು 8 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರ ದರ್ಶನ ಪಡೆದರು. ದೇಗುಲದ ಪೂರ್ವ ನಡಪ್ಪಂದಲ್‌ನಲ್ಲಿ ಕೊಚ್ಚಿನ್ ದೇವಸ್ವಂ ಮಂಡಳಿಯ ಪದಾಧಿಕಾರಿಗಳು ಮುಖ್ಯ ನ್ಯಾಯಮೂರ್ತಿಗಳಿಗೆ ಶಾಲು ಹೊದಿಸಿ, ದೇವಿಯ ಚಿತ್ರಪಟ ನೀಡಿ ಗೌರವಿಸಿದರು. ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಸಿಜೆಐ ಹಾಗೂ ಅವರ ಕುಟುಂಬಸ್ಥರು ಬೆಳಿಗ್ಗೆ 9 ಗಂಟೆಯ ವೇಳೆಗೆ ಅಲ್ಲಿಂದ ನಿರ್ಗಮಿಸಿದರು.

ಈ ಭೇಟಿಯ ಸಂದರ್ಭದಲ್ಲಿ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೌಮ್ಯಸೇನ್ ಶರ್ಮಾ, ಅವರ ಕುಟುಂಬದವರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಎ.ಕೆ. ಪ್ರೀತಾ ಅವರು ಸಿಜೆಐ ಅವರ ಜೊತೆಗಿದ್ದರು.

ಇವರೊಂದಿಗೆ ಕೊಚ್ಚಿನ್ ದೇವಸ್ವಂ ಮಂಡಳಿ ಸದಸ್ಯರಾದ ವಕೀಲ ಕೆ.ಪಿ. ಅಜಯನ್, ಕೆ.ಕೆ. ಸುರೇಶ್ ಬಾಬು, ಚೋಟಾನಿಕ್ಕರ ಸಹಾಯಕ ಆಯುಕ್ತ ಎಂ.ಜಿ. ಯಹುಲದಾಸ್, ದೇವಸ್ವಂ ಮ್ಯಾನೇಜರ್ ಕೆ.ಎಸ್. ರಾಜೀವ್ ಹಾಗೂ ದೇವಾಲಯ ಸಲಹಾ ಸಮಿತಿ ಅಧ್ಯಕ್ಷ ಪ್ರವೀಣ್ ಬಾಲಕೃಷ್ಣನ್ ಉಪಸ್ಥಿತರಿದ್ದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries