ಕಾಸರಗೋಡು: ಫುಟ್ಬಾಲ್ ಪಂದ್ಯಾಟದ ವೇಳೆ ಎರಡು ಕ್ಲಬ್‍ಗಳ ಆಟಗಾರರ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ಗಂಭೀರ ಗಾಐಗೊಂಡಿದ್ದಾರೆ. ಚೆರ್ಕಳ ಬಾಲಡ್ಕ ಹೌಸ್‍ನ ಅಬ್ದುಲ್ ರಶೀದ್ ಎನ್.ಎ. (28)ಗಾಯಾಳು. ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ವಿರುದ್ಧ ವಿದ್ಯಾನಗರ ಠಾಣೆ ಪೆÇಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹನೀಫ ಆಲಂಪಾಡಿ, ರಮಿ, ಉದು, ಆಶಿಕ್, ಶಿಫಾರತ್ ಮತ್ತು ಅಫ್ಸಲ್ ಎಂಬವರ ವಿರುದ್ಧ ಪೆÇಲೀಸರು ನರ ಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಯುಮಾರ್ ಮೋಲೆಯಲ್ಲಿ ಕೇರಳೋತ್ಸವದ ಅಂಗವಾಗಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಆಟಗಾರರ ನಡುವೆ ಪರಸ್ಪರ ವಾಗ್ವಾದ ಉಂಟಾಗಿತ್ತು. ತನ್ನ ಸ್ನೇಹಿತನೋರ್ವನಿಗೆ ಬೆದರಿಕೆಯೊಡ್ಡಿ ಆತನನ್ನು ಥಳಿಸುತ್ತಿರುವುದನ್ನು ಕಂಡು ತಡೆಯಲು ಹೋದ ತನ್ನ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ಅಬ್ದುಲ್ ರಶೀದ್ ತಿಳಿಸಿದ್ದಾರೆ.

