HEALTH TIPS

66ನೇ ಅಖಿಲಭಾರತ ಸಹಕಾರಿ ಸಪ್ತಾಹ-ನ. 14ರಂದು ಜಿಲ್ಲಾಮಟ್ಟದ ಕಾರ್ಯಕ್ರಮ ಉದ್ಘಾಟನೆ

   
         ಕಾಸರಗೋಡು: 66ನೇ ಅಖಿಲಭಾರತ ಸಹಕಾರಿ ವಾರಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ನವೆಂಬರ್ 14ರಂದು ಚಿತ್ತಾರಿಕಲ್‍ನಲ್ಲಿ ಜರುಗಲಿದೆ. ಜಿಲ್ಲಾಮಟ್ಟದ ಉದ್ಘಾಟನೆಗೆ ಪೂರ್ವಭಾವಿಯಾಘಿ ನ. 13ರಂದು ಚಿತ್ತಾರಿಕಲ್‍ನಲ್ಲಿ ಆಕರ್ಷಕ ಡಂಗುರ ಮೆರವಣಿಗೆ ನಡೆಯಲಿರುವುದು.
      ವಾರಾಚರಣೆಯ ಸಮಾರೋಪ ಸಮಾರಂಭ ನ. 20ರಂದು ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಲಿದೆ. ವಾರಾಚರಣೆ ಅಂಗವಾಗಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ವಿಚಾರಗೋಷ್ಠಿ ನಡೆಯುಲಿರುವುದು. ಈ ಸಂದರ್ಭ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ ತಾಲೂಕುಮಟ್ಟದ ಭಾಷಣ, ಪ್ರಬಂಧ ರಚನೆ ಸಹಿತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಒಳಪಡಿಸಿ ಜಿಲ್ಲಾ ಮಟ್ಟದ ಸ್ಪರ್ಧೆ ಅ. 28ರಂದು ಕಾಸರಗೋಡು ಜಿಲ್ಲಾ ಬ್ಯಾಂಕ್ ಸಭಾಂಗಣದಲ್ಲಿ ಜರುಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಜಿಲ್ಲಾಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ  ಸಹಕಾರಿ ಸಂಘದ ಜಂಟಿ ನಿಬಂಧಕ ವಿ.ಮಹಮ್ಮದ್ ನೌಷಾದ್ ಅಧ್ಯಕ್ಷತೆ ವಹಿಸಿದ್ದರು. ಜಂಟಿ ನಿರ್ದೇಶಕ ಎಸ್.ಪಿ ಪ್ರೀಜಿ, ಸಹಾಯಕ ನಿಬಂಧಕ ಪಿ.ಅಬ್ದುಲ್ ಅಸೀಸ್, ಜಿಲ್ಲಾಬ್ಯಾಂಕ್ ಮಹಾಪ್ರಬಂಧಕ ಎ.ಅನಿಲ್‍ಕುಮಾರ್, ಕೆ. ಮುರಳೀಧರನ್, ಕೆ. ಜಯಚಂದ್ರನ್, ಕೆ. ರಆಜಗೋಪಾಲ್, ವಿ.ಚಂದ್ರನ್, ವಿ.ಟಿ ಥಾಮಸ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries