ಬದಿಯಡ್ಕ: ಕೆಲವು ದಿನಗಳಿಂದ ಸುರಿದ ನಿರಂತರ ಮಳೆ ಮತ್ತು ಬಿರುಗಾಳಿಯಿಂದ ಮಾನ್ಯ ಬಯಲಿನಲ್ಲಿ ಅಪಾರ ಕೃಷಿ ನಾಶ ನಷ್ಟ ಸಂಭವಿಸಿದ್ದು, ಜಿಲ್ಲಾ ಪಂಚಾಯತಿ ಸದಸ್ಯರೂ, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಕೆ.ಶ್ರೀಕಾಂತ್ ಮತ್ತು ಬದಿಯಡ್ಕ ಪಂಚಾಯತಿ ಸದಸ್ಯೆ ಪ್ರೇಮಕುಮಾರಿ ಭಾನುವಾರ ಭೇಟಿನೀಡಿ ತೀವ್ರ ಮಳೆಯಿಂದಾಗಿ ಉಂಟಾದ ಕೃಷಿ ನಾಶ ನಷ್ಟದ ಬಗ್ಗೆ ಮಾಹಿತಿ ಪಡೆದರು.
ಸ್ಥಳೀಯ ಕೃಷಿಕರು ನಾಶನಷ್ಟದ ಬಗೆಗಿನ ಮಾಹಿತಿ ನೀಡಿದರು. ತಿರುಮಲೇಶ್ವರ, ವಿನಯ ಕುಮಾರ್, ವೇಣುಗೋಪಾಲ, ರಾಧಾಕೃಷ್ಣ, ಗಿರೀಶ್, ಧರ್ಮಪಾಲ, ಶ್ರೀನಿವಾಸ, ರಾಜ, ಪುರುಷೋತ್ತಮ, ವಿವೇಕ್, ಚಂದ್ರೇಶ್, ಕೃಷ್ಣ ನಾಯ್ಕ, ವೆಂಕಪ್ಪು ನಾಯ್ಕ, ವಿಘ್ನೇಶ್, ಜಯಂತಿ, ಪದ್ಮಾವತಿ ಮುಂತಾದವರು ಉಪಸ್ಥಿತರಿದ್ದರು.


