ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಿಕೆಯರು ಉಪಜಿಲ್ಲಾ ಮಟ್ಟ ಹಾಗೂ ಜಿಲ್ಲಾಮಟ್ಟದ ಗಣಿತಮೇಳದಲ್ಲಿ ಸ್ಪರ್ಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಧ್ಯಾಪಿಕೆ ಜ್ಯೋತ್ಸ್ನಾ ಎಂ.ಕಡಂದೇಲು ಅವರು ಅಧ್ಯಾಪಕರ ಬೋಧನೋಪಕರಣ ತಯಾರಿಯ ಸ್ಪರ್ಧೆಯಲ್ಲಿ ಉಪಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಧ್ಯಾಪಿಕೆ ದಿವ್ಯಾ ಅವರು ಮಾಹಿತಿ ತಂತ್ರಜ್ಞಾನ ಬೋಧನೋಪಕರಣ ತಯಾರಿಯ ಸ್ಪರ್ಧೆಯಲ್ಲಿ ಉಪಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಗಳು ತೃಶ್ಶೂರಿನಲ್ಲಿ ನಡೆಯಲಿದೆ. ಶಾಲಾ ಆಡಳಿತಮಂಡಳಿ, ಮುಖ್ಯೋಪಾಧ್ಯಾಯಿನಿ ತಂಗಮಣಿ, ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.


