ಬದಿಯಡ್ಕ: ಭಟ್ ಏಂಡ್ ಕೋ ಬ್ರದರ್ಸ್, ಗೌರಿಕೃಪಾ ಸಂಕೀರ್ಣದಲ್ಲಿ ವರ್ಷಂಪ್ರತಿಯಂತೆ ದೀಪಾವಳಿ ಉತ್ಸವ, ಅಂಗಡಿಪೂಜೆಯ ಅಂಗವಾಗಿ ದಿ. ಜಿ.ಕೆ.ಭಟ್ ಚೇರ್ಕೂಡ್ಲು ಅವರ ಸ್ಮರಣಾರ್ಥ ಅ.27ರಂದು ಭಾನುವಾರ ಬೋಳುಕಟ್ಟೆ ಮೈದಾನದ ವಠಾರದಲ್ಲಿ ಅಪರಾಹ್ನ 2.30ರಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದು. ಸಭಾಕಾರ್ಯಕ್ರಮವನ್ನು ಸುಧಾ ಜಿ.ಭಟ್ ಉದ್ಘಾಟಿಸಲಿರುವರು. ಡಾ. ಬೇ.ಸೀ.ಗೋಪಾಲಕೃಷ್ಣ ಭಟ್, ರಂಗಶರ್ಮಾ ಉಪ್ಪಂಗಳ, ರಾಜೇಶ್ ಮಾಸ್ತರ್ ಅಗಲ್ಪಾಡಿ ಶುಭಾಶಂಸನೆಗೈಯಲಿರುವರು. 3 ಗಂಟೆಯಿಂದ ವಿವಿಧ ಸ್ಪರ್ಧೆಗಳು ನಡೆಯಲಿರುವುದು.
ಅ.28ರಂದು ಸಂಜೆ 5.30ರಿಂದ 7ರ ತನಕ ನಳಂದ ಕಲಾಕೇಂದ್ರ ಬದಿಯಡ್ಕ ಇವರ ವತಿಯಿಂದ ಸಂಗೀತ ಮಾಧುರ್ಯ, 7ರಿಂದ ಸಭಾಕಾರ್ಯಕ್ರಮ ನಡೆಯಲಿರುವುದು. ಶಿವದಾಸ್ ಚೆನ್ನಂಗೋಡು, ಕೃಷ್ಣಮೂರ್ತಿ ಎಡಪ್ಪಾಡಿ, ರವಿ ನವಶಕ್ತಿ, ಸುಧಾ ಜಿ.ಭಟ್, ಮುಹಮ್ಮದ್ ಆಲಿ ಪೆರ್ಲ, ಬೇಂದ್ರೋಡು ಗೋವಿಂದ ಭಟ್, ಹರೀಶ್ ಚೇರ್ಕೂಡ್ಲು, ಗಣೇಶ್ ಚೆರ್ಕೂಡ್ಲು ಪಾಲ್ಗೊಳ್ಳಲಿರುವರು. ಇದೇ ಸಂದರ್ಭದಲ್ಲಿ ಹಿರಿಯ ವ್ಯಾಪಾರಿಗಳಾದ ನಾರಾಯಣ ಚೆಟ್ಟಿಯಾರ್ ಹಾಗೂ ಬಿ.ಹಂಸ ಇವರನ್ನು ಸನ್ಮಾನಿಸಲಾಗುವುದು. ಬಳಿಕ ಬೇಂದ್ರೋಡು ಗೋವಿಂದ ಭಟ್ ಮತ್ತು ಬಳಗದವರಿಂದ `ಅಗ್ರಪೂಜೆ' ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ 10 ರಿಂದ ಅಂಗಡಿ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಲಿದೆ.