ಪೆರ್ಲ:ಕೇರಳ ಕೃಷಿ ವಿಶ್ವವಿದ್ಯಾಲಯ ಉತ್ಪಾದಿಸಿದ ಉತ್ತಮ ತಳಿಯ ಹೈಬ್ರಿಡ್ ತೆಂಗಿನ ಗಿಡಗಳು(ಕೇರ ಶಂಕರ ಟಿ ಇನ್ ಟು ಡಿ) ಎಣ್ಮಕಜೆ ಕೃಷಿ ಭವನದಲ್ಲಿ ಲಭ್ಯವಿದೆ.
ರೂ.250 ಬೆಲೆಯ ಗಿಡಗಳನ್ನು ಕೃಷಿಕರಿಗೆ ಶೇ.50 ರಿಯಾಯಿತಿ ದರದಲ್ಲಿ ಗಿಡವೊಂದಕ್ಕೆ ರೂ.125ರಂತೆ ವಿತರಿಸಲಾಗುತ್ತಿದೆ. ಅಗತ್ಯವಿರುವ ಕೃಷಿಕರು ಅ.31ರ ಮುಂಚಿತವಾಗಿ ಭೂತೆರಿಗೆ ನಕಲಿಯೊಂದಿಗೆ ಕೃಷಿ ಭವನ ಸಂಪರ್ಕಿಸುವಂತೆ ಕೃಷಿ ಅಧಿಕಾರಿ ತಿಳಿಸಿದ್ದಾರೆ.


