ಬದಿಯಡ್ಕ,: ಕ್ರೀಡೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನೂ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಿಜವಾದ ಕ್ರೀಡಾಳುಗಳಾಗಿ ವಿದ್ಯಾರ್ಥಿಗಳು ಬದಲಾಗುವುದು ಸ್ಪರ್ಧಾ ಕಣದಲ್ಲಿ. ಕ್ರೀಡೆಯ ಬೇರು ಶಾಲಾ ಬಯಲಿನಲ್ಲಿದೆ. ಯಾವುದೇ ಕ್ರೀಡಾ ಸಾಧಕನ ಮೊದಲ ಸಾಧನೆ ಅವರ ಶಾಲೆಯ ಬಯಲಿನಿಂದಲೇ ಪ್ರಾರಂಭವಾಗಿರುತ್ತದೆ ಎಂದು ಕೊಲ್ಲಂಗಾನ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ಫಾ,ಡೇನಿಯಲ್ ಡಿ'ಸೋಜ ಅಭಿಪ್ರಾಯ ಪಟ್ಟರು.
ಅವರು ಶಾಲೆಯಲ್ಲಿ ನಡೆದ 2019-20ನೆ ಸಾಲಿನ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವ ಹೊರಾಂಗಣ ಕ್ರೀಡೆಗಳಿಗೆ ಹೆಚ್ಚು ಒತ್ತು ಕೊಡಬೇಕು. ಆ ನಿಟ್ಟಿನಲ್ಲಿ ಶಾಲಾ ಕ್ರೀಡೋತ್ಸವವು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಮುಖ್ಯೋಪಾಧ್ಯಾಯಿನಿ ಸಿಸ್ಟರ್.ಫ್ಲೋರಿನ್ ಜ್ಯೋತಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜೋಸೆಫ್ ಕ್ರಾಸ್ತಾ, ಸದಸ್ಯ ಶ್ರೀಹರ್ಷ ಶುಭ ಹಾರೈಸಿದರು. ತೃಷಾ ಕ್ರೀಡಾ ಜ್ಯೋತಿಗೆ ನೇತೃತ್ವ ನೀಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶಿಕ್ಷಕಿ ರೋಹಿಣಿ ಸ್ವಾಗತಿಸಿ, ಸಂಧ್ಯಾಲತಾ ವಂದಿಸಿದರು. ಇವಾ ಕಾರ್ಯಕ್ರಮ ನಿರೂಪಿಸಿದರು. ಕ್ರೀಡೋತ್ಸವದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.


