ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತಿ ಕೇರಳೋತ್ಸವ ಆರಂಭಗೊಂಡಿದೆ. ಮೂರು ದಿನಗಳ ಕಾಲ ವಿವಿಧ ಸಮಾರಂಭಗಳೊಂದಿಗೆ ನಡೆಯುವ ಕೇರಳೋತ್ಸವದ ಉದ್ಘಾಟನೆ ಕೊಡ್ಲಮೊಗರು ಶ್ರೀ ವಾಣಿವಿಜಯ ಶಾಲೆಯಲ್ಲಿ ಜರುಗಿತು.
ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪಾ ಅಮೆಕ್ಕಳ ಉದ್ಘಾಟಿಸಿದರು. ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಸದಸ್ಯ ಫಾತಿಮತ್ ಸುಹರಾ, ಸದಾಶಿವ, ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಸುನಿತಾ ಡಿಸೋಜಾ, ರಹಮತ್ ರಝಾಕ್, ಜೆಸಿಂತಾ ಡಿಸೋಝಾ, ಸದಸ್ಯರು ಉಪಸ್ಥಿತರಿದ್ದರು. ಸಹ ಸಂಚಾಲಕ ಜಮಾಲುದ್ದೀನ್ ಸ್ವಾಗತಿಸಿ, ಯುವ ಸಂಚಾಲಕ ಜಯಪ್ರಕಾಶ್ ವಂದಿಸಿದರು. ಕಾರ್ಯಕ್ರಮ ಅಂಗವಾಗಿ ಕ್ರಿಕೆಟ್ ಪಂದ್ಯಾಟ ಜರುಗಿತು.