ಕುಂಬಳೆ: ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಬ್ರಹ್ಮಕಲಶೋತ್ಸವ ದೇವಸ್ಥಾನದಲ್ಲಿ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧ ಕಾರ್ಯಕ್ರಮಗಲೊಂದಿಗೆ ಸಂಪನ್ನಗೊಂಡಿತು.
ಗುರುವಾರ ಪೂರ್ವಾಹ್ನ ನಿತ್ಯ ಪೂಜೆ, ಪುಣ್ಯಾಹ, ಶ್ರೀದೇವಿಗೆ ಪಂಚಾಮೃತ ಸಹಿತ ಎಳನೀರು ಅಭಿಷೇಕ, ಸರ್ವಾಲಂಕಾರ ಸಹಿತ ವಿಶೇಷ ಪೂಜೆ, ಸಂಪೆÇ್ರೀಕ್ಷಣೆ, ಮಹಾಮಂತ್ರಾಕ್ಷತೆ, ಶ್ರೀ ಗುಳಿಗ ದೈವದ ಕೋಲ, ಮಧ್ಯಾಹ್ನ ಅನ್ನಸಂತರ್ಪಣೆ, ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿ ಹಾಗು ಆಶೀರ್ವಚನದೊಂದಿಗೆ ಸಮಾರೋಪ ಸಮಾರಂಧ ಜರಗಿತು. ಇದೇ ಸಂದರ್ಭದಲ್ಲಿ ಸಾಧಕರಿಗೆ ಗೌರವಾರ್ಪಣೆ, ಸೇವಾ ಕತೃಗಳಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು.
ಮಾ.11 ರಂದು ಪೂರ್ವಾಹ್ನ ಶ್ರೀ ಗುರುಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಅಂಕುರ ಪೂಜೆ, ನವಗ್ರಹ ಪೂಜೆ, ಮಹಾಗಣಪತಿ ಹೋಮ, ಕಲಾತತ್ವಾದಿ ಹೋಮಗಳು, ಗೋಪೂಜೆ, ಗೋಪ್ರವೇಶ, ಶಂಖನಾದ, ಕವಾಟೋದ್ಘಾಟನೆ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ನಿತ್ಯನೈಮಿತ್ತಿಕ ನಿರ್ಣಯ, ಯಾಗ ಮಂಟಪದಲ್ಲಿ ಶ್ರೀ ಚಂಡಿಕಾ ಹೋಮ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ, ಮಹಾಪೂಜೆ, ಮೊದಲ ಬಾರಿಗೆ ಶ್ರೀ ದೇವರ ಬಿಂಬ ಬಲಿ, ಮಹಾ ಅನ್ನ ಸಂತರ್ಪಣೆ, ಸಂಜೆ ದೀಪಾರಾಧನೆ, ತಾಯಂಬಕ, ಸೋಪನ ಸಂಗೀತ ಸ್ಯಾಕ್ಸೋಫೆÇೀನ್ ವಾದನ, ರಾತ್ರಿ ಶ್ರೀ ದೇವರ ಮಹಾಪೂಜೆ, ಭೂತಬಲಿ, ವಸಂತ ಮಂಟಪದಲ್ಲಿ ಅಷ್ಟಾವಧಾನ ಸಹಿತ ಪೂಜೆ, ರಾಜಾಂಗಣ ಪ್ರಸಾದ, ಶ್ರೀ ದೇವರ ಆಲಯ ಪ್ರವೇಶ, ಮಹಾಪೂಜೆ ಮೊದಲಾದವು ಜರಗಿತು.

