HEALTH TIPS

ಕೊರೋನಾ ವೈರಸ್: ವಿಶ್ವಾದ್ಯಂತ 25 ಲಕ್ಷ ಗಡಿದಾಟಿದ ಸೋಂಕಿತರ ಸಂಖ್ಯೆ, 1.77 ಲಕ್ಷ ಸಾವು

 
          ವಾಷಿಂಗ್ಟನ್: ವಿಶ್ವದ 130ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ವಿಶ್ವಾದ್ಯಂತ 25 ಲಕ್ಷ ಗಡಿದಾಟಿದೆ. ಅಂತೆಯೇ ಈ ವರೆಗೂ 1.77 ಲಕ್ಷ ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
      ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲೂ ಕೊರೋನಾ ಅಟ್ಟಹಾಸ ನಡೆಯುತ್ತಿದೆ. ಈಗಾಗಲೇ ವಿಶ್ವಾದ್ಯಂತ ಕೊರೋನಾ ವೈರಸ್?ನಿಂದ 1.77 ಲಕ್ಷ ಜನರು ಸಾವನ್ನಪ್ಪಿದ್ದಾರೆ. 25.57 ಲಕ್ಷ ಜನರಲ್ಲಿ ಸೋಂಕು ಪತ್ತೆಯಾಗಿದೆ. ಅವರಲ್ಲಿ 6.95 ಲಕ್ಷ ಜನರು ಚಿಕಿತ್ಸೆ ಪಡೆದು, ಗುಣಮುಖರಾಗಿ  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
        ಕೊರೋನಾ ಸೋಂಕಿತ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 8.19 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ ಅಮೆರಿಕದಲ್ಲಿ 45,343 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. 2ನೇ ಸ್ಥಾನದಲ್ಲಿರುವ ಸ್ಪೇನ್?ನಲ್ಲಿ 2.4 ಲಕ್ಷ ಜನರಿಗೆ ಸೋಂಕು ಪತ್ತೆಯಾಗಿದ್ದು,  21,283 ಜನ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,141ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಅಮೆರಿಕದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 45 ಸಾವಿರ ಗಡಿ ದಾಟಿದೆ ಎಂದು ತಿಳಿದುಬಂದಿದೆ. 8.19 ಲಕ್ಷ ಮಂದಿಯಲ್ಲಿ  ಸೋಂಕಿರುವುದು ದೃಢಪಟ್ಟಿದೆ. ಕೊರೋನಾ ಸೋಂಕಿತ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 8.19 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ ಅಮೆರಿಕದಲ್ಲಿ 45,343 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. 2ನೇ ಸ್ಥಾನದಲ್ಲಿರುವ ಸ್ಪೇನ್?ನಲ್ಲಿ 2.4 ಲಕ್ಷ  ಜನರಿಗೆ ಸೋಂಕು ಪತ್ತೆಯಾಗಿದ್ದು, 21,283 ಜನ ಸಾವನ್ನಪ್ಪಿದ್ದಾರೆ. ಇನ್ನು ಅಮೆರಿಕದಲ್ಲಿ ಕೊರೋನಾ ವೈರಸ್ ಗೆ ನಿತ್ಯ 2 ಸಾವಿರ ಮಂದಿ ಬಲಿಯಾಗುತ್ತಿದ್ದು, ಇದೇ ಕಾರಣಕ್ಕೆ ನ್ಯೂಯಾರ್ಕ್ ಗವರ್ನರ್ ಕೋವಿಡ್-19 ಪರೀಕ್ಷಾ ಸಾಮಥ್ರ್ಯವನ್ನು ದುಪ್ಪಟ್ಟುಗೊಳಿಸಿದ್ದಾರೆ.
     ಇಟಲಿಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಸಾವನ್ನಪ್ಪಿದವರ ಸಂಖ್ಯೆ 24,648 ಆಗಿದೆ. ಸ್ಪೇನ್?ನಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ತಲುಪಿದೆ. 21 ಸಾವಿರ ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 1.83 ಲಕ್ಷ ಜನರಿಗೆ ಸೋಂಕು ಅಂಟಿದ್ದು, ಸಾವಿನ ಸಂಖ್ಯೆ 24  ಸಾವಿರದ ಗಡಿ ತಲುಪಿದೆ. ಈ ಮೊದಲ ವಾರಗಳಿಗೆ ಹೋಲಿಸಿದರೆ ಇಟಲಿಯಲ್ಲಿ ಕೊರೋನಾ ಕೊಂಚ ನಿಯಂತ್ರಣಕ್ಕೆ ಬಂದಿದೆ ಎನ್ನಬಹುದು. ಫ್ರಾನ್ಸ್?, ಜರ್ಮನಿ, ಇಂಗ್ಲೆಂಡ್?ನಲ್ಲೂ ಪರಿಸ್ಥಿತಿ ಕೈ ಮೀರಿದೆ. ಫ್ರಾನ್ಸ್?ನಲ್ಲಿ 1.58 ಲಕ್ಷ ಮಂದಿಗೆ ಕೊರೋನಾ ದೃಢಪಟ್ಟಿದೆ. 20 ಸಾವಿರ ಮಂದಿ  ಮೃತಪಟ್ಟಿದ್ದಾರೆ. ಜರ್ಮನಿಯಲ್ಲಿ 1.48 ಲಕ್ಷ ಜನರಿಗೆ ಕೊರೋನಾ ಸೋಂಕಿದೆ. 5086 ಜನರು ಮೃತಪಟ್ಟಿದ್ದಾರೆ.
        ಬ್ರೆಜಿಲ್ ನಲ್ಲಿ 2,741 ಮಂದಿ ಸಾವನ್ನಪ್ಪಿದ್ದು, ಅಂತೆಯೇ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 43,079ಕ್ಕೆ ಏರಿಕೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries