HEALTH TIPS

ಕಾಸರಗೋಡು ಜಿಲ್ಲಾ ಪೋಲೀಸ್ ತರಬೇತಿ ಕೇಂದ್ರ ಉದ್ಘಾಟನೆ


        ಕಾಸರಗೋಡು: ಜಿಲ್ಲೆಯ ಪೋಲೀಸರಿಗೆ ತರಬೇತಿ ನೀಡುವ ಉದ್ದೇಶದಿಂದ ಪಾರೆಕಟ್ಟೆ ಜಿಲ್ಲಾ ಪೋಲೀಸ್ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಜಿಲ್ಲಾ ಪೋಲೀಸ್ ತರಬೇತಿ ಕೇಂದ್ರ ಗುರುವಾರ ಉದ್ಘಾಟನೆಗೊಂಡಿದೆ.
       ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಕೇಂದ್ರವನ್ನು ಉದ್ಘಾಟಿಸಿದರು.
        ಜಾಗತಿಕ ಗುಣಮಟ್ಟದ ತರಬೇತಿ ಪೋಲೀಸ್ ಪಡೆಗೆ ಒದಗಿಸುವ ಉದ್ದೇಶದಿಂದ ತರಬೇತಿ ಕೇಂದ್ರ ನಿರ್ಮಿಸಲಾಗಿದೆ. ತರಬೇತಿಗಾಗಿ ಆಗಮಿಸುವ ಮಂದಿಗೆ ವಸತಿ ಸೌಲಭ್ಯವನ್ನೂ ಈ ಮೂಲಕ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಈ ವೇಳೆ ತಿಳಿಸಿದರು.
          2017-18 ವರ್ಷದ ರಾಜ್ಯ ಸರಕಾರದ ಯೋಜನೆ ನಿಧಿಯಾಗಿರುವ 90 ಲಕ್ಷ ರೂ. ಬಳಸಿ ಈ ತರಬೇತಿ ಕೇಂದ್ರ ನಿರ್ಮಿಸಲಾಗಿದೆ. ಕೇರಳ ಪೆÇಲೀಸ್ ಹೌಸಿಂಗ್ ಕನ್ಸ್ ಸ್ಟ್ರ ಕ್ಷನ್ ಕಾರ್ಪರೇಷನ್ ನಿರ್ಮಾಣದ ಹೊಣೆ ವಹಿಸಿತ್ತು.
        ಈ ಸಂಬಂಧ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಉಪಾಧ್ಯಕ್ಷ ದಿವಾಕರ ಆಚಾರ್ಯ, ಸ್ಪೆಷ್ಯಲ್ ಮೊಬೈಲ್ ಸ್ಕ್ವಾಡ್ ಡಿ.ವೈ.ಎಸ್.ಪಿ. ಹರಿಶ್ಚಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಸ್ವಾಗತಿಸಿ, ಸಹಾಯಕ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಝೇವ್ಯರ್ ಸೆಬಾಸ್ಟಿನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries