HEALTH TIPS

ಸ್ವಾತಂತ್ರ್ಯ ದಿನವನ್ನು ಅವಮಾನಿಸಿದ ಪ್ರಧಾನಿ: ಪಿಣರಾಯಿ ವಿಜಯನ್‌

ತಿರುವನಂತಪುರಂ: 'ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಆರ್‌ಎಸ್‌ಎಸ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೈಭವೀಕರಿಸಿರುವುದು ಆ ದಿನವನ್ನೇ ಅವಮಾನಿಸಿದಂತಾಗಿದೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕಿಡಿಕಾರಿದ್ದಾರೆ.


'ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾದ ಬಲಪಂಥೀಯ ಸಂಘಟನೆ ಆರ್‌ಎಸ್‌ಎಸ್‌ ಅನ್ನು ಪ್ರಧಾನಿ ಮೋದಿ ಅವರು ಹೊಗಳಿರುವುದು ಸ್ವಾತಂತ್ರ್ಯ ಪಿತೃತ್ವವನ್ನು ಆ ಸಂಘಟನೆಗೆ ನೀಡಿದಂತಾಗಿದೆ' ಎಂದು ವಿಜಯನ್‌ ಅವರು ಕಚೇರಿ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

'ಮೋದಿ ಅವರ ನಡೆಯು 'ಇತಿಹಾಸವನ್ನು ತಿರಸ್ಕರಿಸುವ' ಹೆಜ್ಜೆಯಾಗಿದೆ. ಆರ್‌ಎಸ್‌ಎಸ್‌ ಹೊಂದಿರುವ ವಿಭಜಕ ರಾಜಕೀಯದ ವಿಷಪೂರಿತ ಇತಿಹಾಸವನ್ನು ಇಂತಹ ನಡೆಗಳಿಂದ ಮರೆಮಾಚಲು ಸಾಧ್ಯವಿಲ್ಲ' ಎಂದು ಕಿಡಿಕಾರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries