ಕಾಸರಗೋಡು: ಕೇರಳ ಸಂಸ್ಕøತ ಶಿಕ್ಷಕರ ಒಕ್ಕೂಟದ ಕಾಸರಗೋಡು ಜಿಲ್ಲಾ ಸಮ್ಮೇಳನ ಕಾಸರಗೋಡು ಬಿಇಎಂ ಶಾಲೆಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಹರಿಕುಮಾರ್ ಇ.ಎ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭೆ ಉಪಾಧ್ಯಕ್ಷ ಕೆ.ಎಂ. ಹನೀಫ್ ಸಮಾರಂಭವನ್ನು ಉದ್ಘಾಟಿಸಿದರು. ಭಾರತದ ಎಲ್ಲಾ ಭಾಷೆಗಳೂ ಸಂಸ್ಕøತದಡಿಯಲ್ಲಿ ಬೆಳೆದಿವೆ. ಸಂಸ್ಕøತದಲ್ಲಿ ಭಾರತದ ಆತ್ಮವಿದೆ ಎಂದರು. ಸೇವೆಯಿಂದ ನಿವೃತ್ತರಾಗುತ್ತಿರುವ ರಮಾನಂದ ಮಾಸ್ತರ್ ಅವರನ್ನು ಅಭಿನಂದಿಸಲಾಯಿತು. ರಾಜ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮುಖ್ಯ ಭಾಷಣ ಮಾಡಿದರು. ರಾಜ್ಯ ಉಪಾಧ್ಯಕ್ಷ ನೀಲಮನ ಶಂಕರನ್ ಮಾಸ್ತರ್, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಜಸೀತಾ ಕೆ.ಕೆ, ಟಿ.ಪಿ. ಪದ್ಮಕುಮಾರ್, ಮಧು ಕೆ, ಪ್ರಸೀತಾ ಕೆ.ಸಿ, ಮನೋಜ್ ಕುಮಾರ್, ನೀಲಮನ ಉಮಾ, ಮಧು ಶ್ಯಾಮ್ ಮತ್ತು ವೆಂಕಟಕೃಷ್ಣ ಭಟ್ ಮಾತನಾಡಿದರು.
ಸಮ್ಮೇಳನವು ಸಂಸ್ಕೃತ ಭಾಷೆಯ ಮಹತ್ವವನ್ನು ಸಾರುವ ಜೊತೆಗೆ ಶಿಕ್ಷಕರ ಏಕತೆ ಮತ್ತು ಸಂಘಟಿತ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಯಿತು. ಕೆ. ಎಸ್‍ಟಿಎಫ್ (ಖಾಸಗಿ ವಿಭಾಗ) ಅಧ್ಯಕ್ಷರಾಗಿ ಪ್ರಸೀದಾ ಕೆ.ಸಿ., ಕಾರ್ಯದರ್ಶಿಯಾಗಿ ಅರುಣ್ ಕುಮಾರ್, ಕೆ. ಎಸ್‍ಟಿಎಫ್ (ಇಲಾಖೆ) ಅಧ್ಯಕ್ಷರಾಗಿ ಪರಮೇಶ್ವರನ್ ಎಚ್, ಕಾರ್ಯದರ್ಶಿಯಾಗಿ ನೀಲಮನ ಉಮಾ, ಖಚಾಂಜಿಯಾಗಿ ವೆಂಕಟಕೃಷ್ಣ ಭಟ್ ಅವರನ್ನು ಆರಿಸಲಾಯಿತು.

.jpg)
