ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆಗೆ ರಿಲಯನ್ಸ್ ಫೌಂಡೇಶನ್ ವತಿಯಿಂದ ಉಚಿತವಾಗಿ ದೊರಕಿದ ನೂತನ ಶಾಲಾ ವಾಹನದ ಉದ್ಘಾಟನಾ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಮೀಂಜ ಪಂಚಾಯತಿ ಅಧ್ಯಕ್ಷ ಸಿ.ಎ. ತಾಜುದ್ದೀನ್ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮೀಂಜ ವಾರ್ಡ್ ಸದಸ್ಯ ಸಿದ್ದಿಕ್ ಕೆ.ಎಂ, ಶಾಲಾ ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಪಂಚಾಯತಿ ಅಧಿಕಾರವನ್ನು ಸ್ವೀಕರಿಸಿದ ಸಿ.ಎ. ತಾಜುದ್ದೀನ್ ಹಾಗೂ ಸಿದ್ದಿಕ್ ಕೆ.ಎಂ. ಇವರನ್ನು ಶಾಲಾ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ರಾಜೇಶ್ವರಿ ಎಸ್ ರಾವ್, ಶಾಲಾ ಪಿಟಿಎ ಅಧ್ಯಕ್ಷ ಜಗದೀಶ್ ಸಿ.ಶೆಟ್ಟಿಗಾರ್ ಹಾಗೂ ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಅಶ್ಲೇಷ ಜಿ ರಾವ್ ಉಪಸ್ಥಿತರಿದ್ದರು. ಅಧ್ಯಾಪಕ ರಘುವೀರ್ ರಾವ್ ನಿರೂಪಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ರಾಮಚಂದ್ರ ಕೆ.ಎಂ. ವಂದಿಸಿದರು.

.jpg)
