HEALTH TIPS

ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಮದ್ಭಾಗವತ ಸಪ್ತಾಹ: ಸಮಿತಿ ರಚನಾ ಸಭೆ

ಬದಿಯಡ್ಕ : ಸಂಘಟಿತರಾಗಿ ತೊಡಗಿಸಿಕೊಂಡಾಗ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತದೆ. ಕಲಿಯುಗದಲ್ಲಿ ಭಜನೆಯೇ ತಪಸ್ಸಾಗಿದೆ. ಮನುಷ್ಯ ಜೀವನದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಸೂಕ್ತ ಮಾರ್ಗ ಭಾಗವತದಲ್ಲಿದೆ. ಮನುಷ್ಯನು ಆತ್ಮದಿಂದ ಪರಮಾತ್ಮನ ಕಡೆಗೆ ಸಾಗಲು ಜೀವನದಲ್ಲಿ ಅಳವಡಿಕೊಳ್ಳುವುದು ಹೇಗೆ ಎಂಬುದು ಭಾಗವತ ಹೇಳಿಕೊಡುತ್ತದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.

ಅವರು ಭಾನುವಾರ ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಏಪ್ರಿಲ್ 10 ರಿಂದ 16ರ ತನಕ ನಡೆಯುವ ಶ್ರೀ ಮದ್ಭಾಗವತ ಸಪ್ತಾಹದ ಸಮಿತಿ ರಚನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಶ್ರೀಮಂದಿರದ ಅರ್ಚಕ, ಅಧ್ಯಾಪಕ ರವಿರಾಜ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶ್ರೀ ಮಂದಿರದ ಸೇವಾ ಸಮಿತಿ ಅಧ್ಯಕ್ಷ ಕೆ.ವಿ.ರಮೇಶ್ ಶರ್ಮಾ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಧಾರ್ಮಿಕ ಮುಂದಾಳು, ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜೆ, ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ, ಅಧ್ಯಾಪಕ ಹರಿನಾರಾಯಣ ಶಿರಂತಡ್ಕ, ಕುಂಬ್ಡಾಜೆ ಗ್ರಾಪಂ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ರಾಮಚಂದ್ರ ಮಾರ್ಪನಡ್ಕ, ಕೃಷ್ಣಮೂರ್ತಿ ಎಡಪ್ಪಾಡಿ, ಅಚ್ಚುತ ಮಾಸ್ತರ್ ಅಗಲ್ಪಾಡಿ, ರವೀಂದ್ರನಾಥ್  ಭಂಡಾರಿ ನಾರಂಪಾಡಿ, ವಾಣಿ ಪ್ರಸಾದ ಅಮ್ಮಣ್ಣಾಯ, ಗುರುಸ್ವಾಮಿ ನಾರಾಯಣ ಮುಖಾರಿ ಮುಂತಾದವರು  ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ವಲಯದ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

ಬಾಲಕೃಷ್ಣ ಕುರುಮುಜ್ಜಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶ್ರೀ ಧರ್ಮಶಾಸ್ತ ಭಜನಾ ಮಂದಿರ ಅಧ್ಯಕ್ಷ ರಾಧಾಕೃಷ್ಣ ನಾಯರ್ ಸ್ವಾಗತಿಸಿ, ಮಹಾಲಿಂಗ ಮಾಸ್ತರ್ ವಂದಿಸಿದರು. ನಾರಾಯಣ ಕೆ.ಎಂ. ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries