ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಕಾಸರಗೋಡು ಬದಿಯಡ್ಕ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಕನ್ಯಪಾಡಿ ಕಾರ್ಯಕ್ಷೇತ್ರದ ನೀರ್ಚಾಲು ಶ್ರೀಕುಮಾರ ಸ್ವಾಮಿ ಭಜನಾ ಮಂದಿರಕ್ಕೆ ಶ್ರೀ ಕ್ಷೇತ್ರದಿಂದ ಮಂಜೂರಾದ 1 ಲಕ್ಷ ರೂ.ಮೊತ್ತವನ್ನು ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅವರಿಗೆ ತಾಲೂಕು ಯೋಜನಾಧಿಕಾರಿ ದಿನೇಶ್ ಬಿ. ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ತಾಲೂಕು ಜನಜಾಗೃತಿ ಸದಸ್ಯರಾದ ಸುಧಾಕರ್, ಸಮಿತಿ ಸದಸ್ಯ ರಮೇಶ್ ಕಳೇರಿ, ಉದಯ ಕುಮಾರ್ ಮೈಕುರಿ, ಬಿ.ಕೆ. ಕೃಷ್ಣ ಹಾಗೂ ಬದಿಯಡ್ಕ ವಲಯ ಮೇಲ್ವಿಚಾರಕಿ ಸುಗುಣ ಓ ಹವಲ್ದಾರ್, ಸೇವಾಪ್ರತಿನಿಧಿ ಬೇಬಿ ಉಪಸ್ಥಿತರಿದ್ದರು.

.jpg)
