ಸಮರಸ ಚಿತ್ರಸುದ್ದಿ: ಬದಿಯಡ್ಕ: ಕುಂಬ್ಡಾಜೆ ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾರ್ಚ್ 1 ರಿಂದ 9ರ ತನಕ ಜರಗಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಗೊನೆ ಕಡಿಯುವ ಮುಹೂರ್ತ ಭಾನುವಾರ ಬೆಳಗ್ಗೆ ಜರಗಿತು. ಮೊಕ್ತೇಸರರು, ಭಗವದ್ಭಕ್ತರು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾರ್ಚ್ 1 ರಂದು ಅಪರಾಹ್ನ ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಿಂದ ವಾದ್ಯಘೋಷಗಳೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

.jpg)
