HEALTH TIPS

ಮೀಂಜ ಹಿಂದೂ ಸಮಾಜೋತ್ಸವ

ಮಂಜೇಶ್ವರ: ಅಂತರಂಗದಲ್ಲಿ ಹಿಂದೂ ಎನ್ನುವ ಜಾಗೃತಿ ಮೂಡಿ ಬರಬೇಕು. ಹಿಂದೂಗಳು ಆಕ್ರಮಿಸುವ ಗುಣಗಳನ್ನು ಹೊಂದಿದವರಲ್ಲ. ಸಂಸ್ಕøತಿಯ ಮೇಲೆ ಅಘಾತಕಾರಿ ಪ್ರಹಾರವಾಗುವಾಗ ಹಿಮ್ಮೆಟ್ಟಿಸುವ ಮೂಲಕ ಧರ್ಮ ರಕ್ಷಣೆ ಪ್ರತಿಯೊಬ್ಬನ ಹೊಣೆಯಾಗಿದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.


ಚಿಗುರುಪಾದೆಯಲ್ಲಿ ಭಾನುವಾರ ನಡೆದ ಮೀಂಜ ಪಂಚಾಯತಿ ಹಿಂದೂ ಸಮಾಜೋತ್ಸವವನ್ನು ಭಾರತಮಾತೆಗೆ ಹೂವನ್ನು ಅರ್ಚಿಸಿ, ದೀಟಿಗೆ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. 


ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರು ಆಶಯ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ವಹಿಸಿದ್ದರು. ಮೀಂಜ ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ ಸ್ವಾಗತಿಸಿ, ಮನೀಷ್ ಶೆಟ್ಟಿ ಸಂತಡ್ಕ ವಂದಿಸಿದರು. ಬಾಲಗೋಕುಲದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ರಾಷ್ಟ್ರ ಭಕ್ತಿ ಗೀತಾ ರಸಮಂಜರಿ, ಶತಕಂಠ ಭಗವದ್ಗೀತೆ ಪಾರಾಯಣ, ಶತಕಂಠ ವಿಷ್ಣು ಸಹಸ್ರನಾಮ ಪಾರಾಯಣ, ಕುಣಿತ ಭಜನೆ ಹಿಂದೂ ಸಮಾಜೋತ್ಸವಕ್ಕೆ ಮೆರುಗು ನೀಡಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries