ಕಾಸರಗೋಡು": ನಗರದ ನುಳ್ಳಿಪ್ಪಾಡಿ ಕನ್ನಡ ಭವನ ಸಮಿತಿ ವತಿಯಿಮದ ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಫೆ. 22ರಂದು ಜರುಗಲಿದೆ. ನುಳ್ಳಿಪಾಡಿಯ ಕನ್ನಡ ಭವನದ ಪ್ರಾಂಗಣದಲ್ಲಿ ಸಜ್ಜುಗೊಳಿಸಲಾದ 'ಚುಟುಕು ಯೋಗಾಚಾರ್ಯ ಡಾ ಎಂ ಜಿ ಆರ್ ಅರಸ್ ವೇದಿಕೆ'ಯಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರಧ್ವಜಾರೋಹಣವನ್ನು ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಅವರು ಮತ್ತು ಕನ್ನಡ ಧ್ವಜಾರೋಹಣವನ್ನು ವಿಜಿ ಕುಮಾರ್ ಅವರು ಮತ್ತು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಹಾರಾರ್ಪಣೆಯನ್ನು ಸುರೇಶ್ ನೆಗಳಗುಳಿ ಅವರು ನಡೆಸಿಕೊಡುವರು.
ಡಾ ಗೋವಿಂದ ಭಟ್ ಸಮರಂಭ ಉದ್ಘಾಟಿಸುವರು. ನಾಡೋಜ ಡಾ ಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮತ್ತು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಶ್ರೀ ರಮೇಶ ಮಹಾಸ್ವಾಮಿಗಳು ಆಶೀರ್ವಚನ ನಿಡುವರು.
ಕಾರ್ಯಕ್ರಮದ ಅಂಗವಾಗಿ ನಡೆಯುವ ಭವ್ಯ ಮೆರವಣಿಗೆಗೆ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಚಾಲನೆ ನೀಡುವರು. ರಾಷ್ಟ್ರಧ್ವಜಾರೋಹಣವನ್ನು ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಅವರು ಮತ್ತು ಕನ್ನಡ ಧ್ವಜಾರೋಹಣವನ್ನು ವಿಜಿ ಕುಮಾರ್ ಅವರು ಮತ್ತು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಹಾರಾರ್ಪಣೆಯನ್ನು ಸುರೇಶ್ ನೆಗಳಗುಳಿ ಅವರು ನಡೆಸಿಕೊಡುವರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿವಿಧ ಕೃತಿಗಳು ಲೋಕಾರ್ಪಣಗೊಳ್ಳಲಿವೆ.

