HEALTH TIPS

ವಾಟ್ಸ್‌ಆಯಪ್ ಸಂದೇಶ ರವಾನೆಗೆ ಮೊಬೈಲ್‌ನಲ್ಲಿ ಸಿಮ್ ಇರಲೇಬೇಕು : ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ

ನವದೆಹಲಿ: ನೋಂದಾಯಿತ ಸಿಮ್ ಮೊಬೈಲ್ ಫೋನ್‌ನಲ್ಲಿ ಇದ್ದರೆ ಮಾತ್ರ ವಾಟ್ಸ್‌ಆಯಪ್ ಮತ್ತು ಟೆಲಿಗ್ರಾಮ್ ಮುಂತಾದ ಸಂದೇಶವಾಹಕ ಆಯಪ್‌ಗಳು ಕಾರ್ಯನಿರ್ವಹಿಸಬೇಕು ಹಾಗೂ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಸಂದೇಶವಾಹಕ ವೆಬ್‌ಗಳು ಆರು ಗಂಟೆಗಳಿಗೊಮ್ಮೆ ಕಡ್ಡಾಯವಾಗಿ ಮರುದೃಢೀಕರಣ ಮಾಡಬೇಕು ಎಂಬ ನಿಯಮವನ್ನು ಸರಕಾರ ಸಡಿಲಿಸುವುದಿಲ್ಲ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಬುಧವಾರ ಸ್ಪಷ್ಟಪಡಿಸಿದ್ದಾರೆ.

ವರಮಾನಕ್ಕಿಂತ ರಾಷ್ಟ್ರೀಯ ಭದ್ರತೆಯೇ ಮುಖ್ಯ ಎಂದು ಹೇಳಿದ್ದಾರೆ.

''ಕಂಪ್ಯೂಟರ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುವ ವೆಬ್‌ಸೈಟ್‌ಗಳು ಆರು ಗಂಟೆಗಳಿಗೊಮ್ಮೆ ಕಡ್ಡಾಯವಾಗಿ ಲಾಗೌಟ್ ಆಗಬೇಕು ಎಂಬ ನಿಯಮದಲ್ಲಿ ಬದಲಾವಣೆ ಮಾಡುವ ಬಗ್ಗೆ ಯೋಚಿಸಿಲ್ಲ. ನಿಯಮಗಳು ಹೇಗಿದ್ದವೋ ಹಾಗೆಯೇ ಇರುತ್ತವೆ'' ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಧ್ಯಾ ಹೇಳಿದರು.

ಆರು ಗಂಟೆಗಳಿಗೊಮ್ಮೆ ಲಾಗೌಟ್ ಆಗುವ ನಿಯಮವು ವೆಬ್ ಮತ್ತು ಆಯಪ್‌ಗಳ ಕಂಪ್ಯೂಟರ್ ಮಾದರಿಗಳ ವರ್ಚುವಲ್ ಸಂಪರ್ಕಗಳಿಗೆ ಮಾತ್ರ ಅನ್ವಯಿಸುತ್ತದೆ ಹಾಗೂ ಮೊಬೈಲ್ ಫೋನ್‌ಗಳಲ್ಲಿರುವ ನೇರ ಸಂಪರ್ಕಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಿಯಮಗಳನ್ನು ಅಳವಡಿಸಿಕೊಳ್ಳಲು ವಿಧಿಸಲಾಗಿರುವ ಫೆಬ್ರವರಿ 28ರ ಗಡುವಿನ ಯಾವುದೇ ವಿಸ್ತರಣೆಯನ್ನು ದೂರಸಂಪರ್ಕ ಇಲಾಖೆ ತಳ್ಳಿಹಾಕಿದೆ.

ದೂರಸಂಪರ್ಕ ಇಲಾಖೆಯು ಕಳೆದ ವರ್ಷದ ನವೆಂಬರ್ 28ರಂದು ಹೊರಡಿಸಿದ ನಿರ್ದೇಶನಗಳ ಪ್ರಕಾರ, ವಾಟ್ಸ್‌ಆಯಪ್, ಟೆಲಿಗ್ರಾಮ್ ಮುಂತಾದ ಒಟಿಟಿ ಸಂದೇಶವಾಹಕ ವೇದಿಕೆಗಳು ಬಳಕೆದಾರರ ಸಕ್ರಿಯ ಸಿಮ್ ಕಾರ್ಡ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಒಂದು ವೇಳೆ, ಫೋನ್‌ನಿಂದ ಸಿಮ್ ತೆಗೆದರೆ ಅಥವಾ ನಿಷ್ಕ್ರಿಯಗೊಂಡರೆ, ಆ ಫೋನ್‌ನಲ್ಲಿ ಆಯಪ್ ಸ್ಥಗಿತಗೊಳ್ಳಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries