ಕಾಸರಗೋಡು: ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು, ಕಣ್ಣೂರು ಹಾಗೂ ಕೋಯಿಕ್ಕೋಡ್ ಜಿಲ್ಲೆ ಒಳಗೊಳ್ಳುವ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಭಾರಿಯಾಗಿ ಬಿಜೆಪಿ ಪಕ್ಷದ ಕೋಯಿಕ್ಕೋಡ್ ವಲಯಧ್ಯಕ್ಷ ವಕೀಲ ಕೆ.ಶ್ರೀಕಾಂತ್ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಪಕ್ಷದ ರಾಜ್ಯ ಸಮಿತಿ ಉಪಾಧ್ಯಕ್ಷ ವಕೀಲ ಕೆ. ಗೋಪಾಲಕೃಷ್ಣನ್ ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಮೂರು ಜಿಲ್ಲೆಗಳಲ್ಲಿ ಮಂಜೇಶ್ವರ, ಕಾಸರಗೋಡು ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಚಟುವಟಿಕೆಗಳ ಮೇಲ್ನೋಟ ಶ್ರೀಕಾಂತ್ ವಹಿಸಲಿದ್ದಾರೆ.


