ಉಪ್ಪಳ: ಕಯ್ಯಾರು ಅರಿಯಾಳ ತರವಾಡಿನ ಶ್ರೀ ಮಲರಾಯ ಬಂಟ ಧೂಮಾವತಿ ದೈವಗಳ "ಧರ್ಮ ನೇಮೋತ್ಸವ" ಮಾ. 26ಮತ್ತು 27ರಂದು ಜರುಗಲಿರುವುದು. 26ರಂದು ಬೆಳಗ್ಗೆ ತಂತ್ರಿವರ್ಯ ಬಂಬ್ರಾಣ ಶ್ರೀ ಶಂಕರ ನಾರಾಯಣ ಕಡಮಣ್ಣಾಯ ಅವರ ನೇತೃತ್ವದಲ್ಲಿ ನವ ಕಲಶಾಭಿಷೇಕ, ಗಣಹೋಮ, ಮುಡಿಪು ಪೂಜೆ ,ನಾಗತಂಬಿಲ ನಡೆಯುವುದು. ರಾತ್ರಿ 8ಕ್ಕೆ ಭಂಡಾರ ಏರಿ ಮಲರಾಯ ಬಂಟ ದೈವಗಳ ಧರ್ಮ ನೇಮೋತ್ಸವ, 27ರಂದು ಬೆಳಗ್ಗೆ ಶ್ರೀ ಧೂಮಾವತಿ ಪೆÇಟ್ಟೋಳ್ ದೈವಗಳ ನೇಮ, ರಾತ್ರಿ 8ಕ್ಕೆ ಶ್ರೀ ಕಲ್ಲುರ್ಟಿ, ಪಂಜುರ್ಲಿ ದೈವಗಳ ತಂಬಿಲ ನಡೆಯುವುದು.
ಮನೋರಂಜನ ಕಾರ್ಯಕ್ರಮದಂಗವಾಗಿ 26ರಂದು ಸಂಜೆ 6ರಿಂದ ರಾತ್ರಿ 12 ರ ವರೆಗೆ ಶ್ರೀ ಆದಿ ಧೂಮಾವತಿ ಶ್ರೀದೇಯಿ ಬೈದೆತಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ, ಗೆಜ್ಜೆ ಗಿರಿ ಇವರಿಂದ "ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ " ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ.

