ಕಾಸರಗೋಡು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ದಿನಾಂಕ ಕೊನೆಗೊಂಡ ಸೋಮವಾರದ ವರೆಗೆ ಜಿಲ್ಲೆಯಲ್ಲಿ ಒಟ್ಟು 79 ಮಂದಿ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿದ್ದು, ಮಂಗಳವಾರ ನಡೆದ ನಾಮಪತ್ರಗಳ ಸೂಕ್ಷ್ಮ ತಪಾಸಣೆ ನಂತರ 63 ನಾಮಪತ್ರಗಳು ಅಂಗೀಕರಿಸಲ್ಪಟ್ಟಿದ್ದು, 16 ನಾಮಪತ್ರಗಳು ತಿರಸ್ಕøತಗೊಂಡಿದೆ.
ತ್ರಿಕರಿಪುರ ಕ್ಷೇತ್ರದಲ್ಲಿ ಸ್ವೀಕರಿಸಲಾದ 14 ನಾಮಪತ್ರಗಳಲ್ಲಿ 12 ನಾಮಪತ್ರಗಳನ್ನು ಅಂಗೀಕರಿಸಲಾಯಿತು. ಎರಡನ್ನು ತಿರಸ್ಕರಿಸಲಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಪ್ರಕಾಶನ್ ಮತ್ತು ಸಿಪಿಐ(ಎಂ) ಅಭ್ಯರ್ಥಿ ಸಾಬು ಅಬ್ರಹಾಂ ಸಲ್ಲಿಸಿದ ನಾಮಪತ್ರಗಳನ್ನು ತಿರಸ್ಕøತಗೊಂಡಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‍ಪಿ ಅಭ್ಯರ್ಥಿ ಸಂಜೀವ, ಸಿಪಿಐ(ಎಂ) ಅಭ್ಯರ್ಥಿ ಕೆ.ಆರ್. ಜಯಾನಂದ, ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್, ಮುಸ್ಲಿಂ ಲೀಗ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್, ಎಸ್‍ಡಿಪಿಐ ಅಭ್ಯರ್ಥಿ ಕೆ.ಎಂ. ಅಶ್ರಫ್, ಮತ್ತು ಸ್ವತಂತ್ರ ಅಭ್ಯರ್ಥಿಗಳಾದ ಮುಹಮ್ಮದ್ ಅಶ್ರಫ್, ಅಬ್ದುಲ್ ಲತೀಫ್.ಐ, ಜೀನ್ ಲೆವಿನಾ ಮೊಂತೆರೊ, ಮುಹಮ್ಮದ್ ಅಶ್ರಫ್ ಕೆ.ಎ, ಜಾನ್ ಡಿಸೋಜಾ, ಮುಹಮ್ಮದ್ ರಫೀಕ್, ಎನ್.ಕೇಶವ ನಾಯಕ್, ಡಿ.ಸುರೇಂದ್ರನ್ ನಾಯರ್ ಮತ್ತು ಕೆ.ಅಬ್ದುಲ್ಲಾ ಅವರ ನಾಮಪತ್ರಗಳನ್ನು ಅಂಗೀಕರಿಸಲಾಯಿತು.
ಮಾ. 26ರ ವರೆಗೆ ನಾಮಪತ್ರಗಳ ಹಿಂತೆಗೆಯಲು ಸಮಯಾವಕಾಶ ಕಲ್ಪಿಸಲಾಗಿದೆ.

