HEALTH TIPS

ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷರ ಸಭೆ, ರೀಲ್ಸ್-ಸ್ವೀಪ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಕಾಸರಗೋಡು: ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷರು, ಲೆಕ್ಕಪತ್ರಗಾರರು, ಕನ್ನಡ ಸಮುದಾಯ ಮಾರ್ಗದರ್ಶಕರು ಮತ್ತು ಕರಾವಳಿ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಕರಾವಳಿ ಸ್ವಯಂಸೇವಕರ ಜಂಟಿ ಸಭೆಯನ್ನು ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆಸಲಾಯಿತು. ಈ ಸಂದರ್ಭ  ಸಿಡಿಎಸ್‍ಗಳಲ್ಲಿ ಕುಟುಂಬಶ್ರೀ ವ್ಯವಸ್ಥೆಯ ಭಾಗವಾಗಿ ನಡೆಸುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸಿ, ಹೊಸ ಹಣಕಾಸು ವರ್ಷದಲ್ಲಿ ಜಾರಿಗೆ ತರಬೇಕಾದ ಯೋಜನೆಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು.   ಸಹಾಯಕ ಮಿಷನ್ ಸಂಯೋಜಕ ಡಿ. ಹರಿದಾಸ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಮಿಷನ್ ಸಂಯೋಜಕಿ ಕೆ.ಎಂ. ಕಿಶೋರ್ ಕುಮಾರ್ ಸ್ವಾಗತಿಸಿದರು ಮತ್ತು ಡಿಪಿಎಂ ರೇಷ್ಮಾ. ಎಂ ವಂದಿಸಿದರು. 


ಇದೇ ಸಂದರ್ಭ 'ಸ್ವೀಪ್'ಅಂಗವಾಗಿ ಆಯೋಜಿಸಲಾದ ವಿಧಾನಸಭಾ ಚುನಾವಣಾ ಅಭಿಯಾನ 2026 ಜಿಲ್ಲಾ ಮಟ್ಟದ ರೀಲ್ಸ್ ಸ್ಪರ್ಧೆ ಮತ್ತು ಜಿಲ್ಲಾ ಮಟ್ಟದ ಮೆಹಂದಿ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ವಿತರಿಸಿದರು.  . 

ರೀಲ್ಸ್ ಸ್ಪರ್ಧೆಯಲ್ಲಿ, ಕಾಸರಗೋಡು ಮುನ್ಸಿಪಲ್ ಸಿಡಿಎಸ್ ಪ್ರಥಮ, ಅಜಾನೂರು ಸಿಡಿಡಿಎಸ್ ದ್ವಿತೀಯ ಮತ್ತು ವಲಿಯಪರಂಬ ಸಿಡಿಎಸ್ ಮೂರನೇ ಸ್ಥಾನ ಗಳಿಸಿತು. ಕನ್ನಡ ಪ್ರದೇಶಕ್ಕೆ ವಿಶೇಷ ಪ್ರಶಸ್ತಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಮಂಜೇಶ್ವರಂ, ಮೀಂಜ ಮತ್ತು ಮಧೂರು ಸಿಡಿಎಸ್ ಪಡೆದುಕೊಂಡಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries