ಉಪ್ಪಳ: ಕೇರಳದ ನೆಡುಮಂಗಾಡ್ ಎಂಬಲ್ಲಿ ಯುವತಿಯೊಬ್ಬಳು ಅನ್ಯಮತೀಯನಾದ ಪ್ರಿಯತಮನೊಂದಿಗೆ ಸೇರಿ ಹೆತ್ತ ಕರುಳ ಕುಡಿಯನ್ನೇ ಕೊಲೆಗೈದಿರುವುದನ್ನು ಪ್ರತಿಭಟಿಸಿ ಹಿಂದೂ ಹಿತರಕ್ಷಣಾ ವೇದಿಕೆ ಮಂಗಲ್ಪಾಡಿ ಪಂಚಾಯತಿ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಭಾರತೀಯ ಜನತಾ ಪಕ್ಷದ ಕಲ್ಲಿಕೋಟೆ ವಲಯದ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ಕಾನೂನು ಬಾಹಿರವಾಗಿ ಒಂದಾಗಿ ಜೀವಿಸಿ ಪುಟ್ಟ ಮಗುವನ್ನು ಕೊಲೆಗೈದ ಅಸ್ಕರ್ ಹಾಗೂ ಅಖಿಲ ಎಂಬವರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ವೀರಪ್ಪ ಅಂಬಾರು ಹಾಗೂ ವಿವಿಧ ಸಂಘಟನೆಗಳ ನೇತಾರರು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೆ.ಪಿ. ವಲ್ಸರಾಜ್ ಸ್ವಾಗತಿಸಿ, ಸುರೇಶ್ ವಿ ಶೆಟ್ಟಿ ಪರಂಕಿಲ ವಂದಿಸಿದರು.

.jpg)
.jpg)
