ಇಂಫಾಲ್: ಮಣಿಪುರದಲ್ಲಿ ಬೇರೆ ಜಿಲ್ಲೆಗಳಲ್ಲಿ ನಡೆಯುವ ಹಿಂಸಾಚಾರದ ಘಟನೆಗಳಿಂದ ಯುವಕರು ವಿಚಲಿತರಾಗದಂತೆ ಜಾಗೃತಿ ಮೂಡಿಸುವಂತೆ ಉಖ್ರುಲ್ ಜಿಲ್ಲೆಯ ಗ್ರಾಮಗಳ ಜನರು ಹಾಗೂ ಅಧಿಕಾರಿಗಳಿಗೆ ಭದ್ರತಾ ಪಡೆಗಳು ಕೇಳಿಕೊಂಡಿವೆ.
ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಶುಕ್ರವಾರ ಸಾವಿಗೀಡಾಗಿದ್ದಾರೆ.
ಈ ಘಟನೆಯಿಂದ ಸಮೀಪದ ಜಿಲ್ಲೆಯ ಜನರು ಉದ್ರೇಕಗೊಳ್ಳುವುದನ್ನು ತಡೆಯಲು ಭದ್ರತಾ ಪಡೆಗಳು ಹಲವು ಕ್ರಮ ಕೈಗೊಂಡಿವೆ.
ಹಲವು ಬಂಕರ್‌ಗಳನ್ನು ಪತ್ತೆಹಚ್ಚಿ ನಾಶಗೊಳಿಸಲಾಗಿದೆ. ಗ್ರಾಮಗಳಲ್ಲಿ ಗಸ್ತು ತಿರುಗಲಾಗುತ್ತಿದ್ದು, ಹೆದ್ದಾರಿಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

