HEALTH TIPS

ಕಯ್ಯಾರರ ಬದುಕು-ಬರಹ ಸಾರ್ವಕಾಲಿಕ ಮೌಲ್ಯದ್ದು: ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಎಸ್ ಹೊರಟ್ಟಿ- ಕಯ್ಯಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅಭಿಮತ

ಕುಂಬಳೆ: ಕವಿ ನಾಡೋಜ ಕಯ್ಯಾರರು ಕ್ರಾಂತಿ ಮತ್ತು ಕರೆಯ ಅನನ್ಯ ರೂಪಗಳಲ್ಲಿ ಕನ್ನಡ ಭಾಷೆಗೆ ಹೊಸ ವ್ಯಾಖ್ಯಾನ ಬರೆದವರು.ಸ್ವಾತಂತ್ರ್ಯ ಹೋರಾಟ, ಕನ್ನಡ ಏಕೀಕರಣ, ವಿಲೀನೀಕರಣ ಚಳವಳಿಗಳೆಂದ ಬಹುವಿಧದ ಚಳುವಳಿಗಳ ನೇತೃತ್ವ ವಹಿಸಿದ, ಕರಾವಳಿಯ ಕನ್ನಡ ಪ್ರಜ್ಞೆಯ ಪ್ರತೀಕ ಕಯ್ಯಾರರ ಬದುಕು-ಕೊಡುಗೆಗಳು ಅತ್ಯಮೂಲ್ಯವಾದುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪೆÇ್ರ. ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು. 


ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದಲ್ಲಿ ಭಾನುವಾರ ಕಯ್ಯಾರು ಕೊಕ್ಕಚಾಲು ಕಾಮಿಲ್ ಶಾಲಾ ವಠಾರದಲ್ಲಿ ನಡೆದ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನಾಚರಣೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಯ್ಯಾರುರು ತಮ್ಮ ಸಾಹಿತ್ಯ ಪ್ರಜ್ಞೆಯ ಪ್ರತೀಕವಾಗಿ ಸಮಾಜ ಕಟ್ಟಿದವರು. ಹಿರಿಯ ಸಾಹಿತಿ, ಕವಿ, ರಾಜಕಾರಣಿ,ಅತ್ಯುತ್ತಮ ಶಿಕ್ಷಕ, ಕೃಷಿಕರಾಗಿ ಅವರು ಕಟ್ಟಿಕೊಟ್ಟ ಮಾರ್ಗ ಅಚ್ಚರಿ ತರುವಂತದ್ದು. ಅವರ ಸಾರ್ವಕಾಲಿಕ ಮೌಲ್ಯದ್ದಾಗಿದ್ದು, ಐಕ್ಯಗಾನವೆಂಬ ಅವರ ಒಂದು ಕವಿತೆ ಇದಕ್ಕೊಂದು ಉದಾಹರಣೆ. ಜೊತೆಗೆ ಬೆಂಕಿ ಬಿದ್ದಿದೆ ಮನೆಗೆ ಎಂಬಂತ ಜನರನ್ನು ಉದ್ದೇಶಿಸಿ ಆಶಯ ರೂಪದ ತಪ್ತ ಜೀವದೊಳಗೆ ಕುದಿವ ಹೃದಯದ ಮೂಲಕ ಮೂಡಿದ ಕವಿತೆಗಳು ನೈಜತೆಯ ಚಿತ್ರಣಗಳಾಗಿ ಬೆರಗು ನೀಡುತ್ತದೆ. ನೆಲ, ಜಲ, ಧನ, ಸಂಸ್ಕøತಿಗಳನ್ನು ಬೆಸೆದು ಬದುಕಿದ ಕನ್ನಡದ ಕವಿ ರಾಷ್ಟ್ರದ ವಿಶಾಲ ದೃಷ್ಟಿಯ ಮತ್ತಿನ ಮಣಿಯಾಗಿದ್ದವರು. ಅವರ ನೆನಪಲ್ಲಿ ನೀಡಲಾಗುವ ಪ್ರಶಸ್ತಿ ಬಸವರಾಜ್ ಎಸ್ ಹೊರಟ್ಟಿ ಹಾಗೂ ಎಟಿಎಸ್ ಆಡಳಿತ ನಿರ್ದೇಶಕ ಡಾ. ಮೂಡಂಬೈಲು ರವಿ ಶೆಟ್ಟಿ ದೋಣಿಂಜೆಗುತ್ತು ಅವರುಗಳಿಗೆ ಪ್ರದಾನಗೈಯ್ಯುತ್ತಿರುವುದು ಶ್ರೇಷ್ಠ ಕಾರ್ಯ ಎಂದವರು ತಿಳಿಸಿದರು.


ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಎಲ್.ಎನ್ ಮುಕುಂದರಾಜ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ  ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಎಸ್ ಹೊರಟ್ಟಿ ಹಾಗೂ ಎಟಿಎಸ್ ಆಡಳಿತ ನಿರ್ದೇಶಕ ಡಾ. ಮೂಡಂಬೈಲು ರವಿ ಶೆಟ್ಟಿ ದೋಣಿಂಜೆಗುತ್ತು ಅವರುಗಳಿಗೆ ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನೋತ್ಸವ 2026 ಪ್ರಶಸ್ತಿ ಪ್ರದಾನಗೈಯ್ಯಲಾಯಿತು. 

ಈ ಸಂದರ್ಭ ಮಾತನಾಡಿದ ಶಾಸಕ ಎಕೆಎಂ ಅಶ್ರಫ್ ಅವರು, ಕನ್ನಡ ಭಾಷೆ, ಸಂಸ್ಕøತಿಯ ಪ್ರೇಮ ತನನ್ನಲ್ಲಿ ಒಡಮೂಡಲು ಪದವಿ ತರಗತಿಯಲ್ಲಿ ಅಧ್ಯಯನ ನಡೆಸಿದ್ದ ಕಯ್ಯಾರರ ವಿವಿಧ ಸಾಹಿತ್ಯ ಬರಹಗಳೇ ಕಾರಣ. ಹೋರಾಟಗಾರರಾಗಿ ನ್ಯಾಯಯುತ ಹಕ್ಕುಗಳಿಗೆ ಅವರು ತೋರಿಸಿದ್ದ ಧೀಮಂತಿಕೆಯ ಧೈರ್ಯವೇ ತನಗೂ ಈಗ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಹಾಗೂ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಲು ಪ್ರೇರಣೆಯಾಯಿತು ಎಂದು ನೆನಪಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅವರು, ಕಾಸರಗೋಡಿನ ಕನ್ನಡ ಅಸ್ಮಿತೆ ನಿಜವಾಗಿಯೂ ಸ್ತುತ್ಯರ್ಹವಾದುದು. ಇಲ್ಲಿಯ ಜನರ ಶುದ್ಧ ಭಾಷಾಪ್ರೇಮ ಅಸದೃಶ್ಯವಾಗಿ ಕರ್ನಾಟಕಕಕ್ಕೂ ಮಾದರಿಯಾಗುವಂತದ್ದು. ನಾಡೋಜ ಕಯ್ಯಾರರ ಹೆಸರಲ್ಲಿ ತನಗೆ ಬಂದಿರುವ ಪ್ರಶಸ್ತಿ ಭಾಷಾ ಸೇವೆಗೆ ತನ್ನನ್ನು ಪ್ರೇರೇಪಿಸಲು ದಾರಿಮಾಡಿಕೊಟ್ಟಿದೆ ಎಂದರು. ಡಾ.ಮೂಡಂಬೈಲು ರವಿ ಶೆಟ್ಟಿ ಮಾತನಾಡಿ ಕನ್ನಡ ಭಾಷೆ, ಸಂಸ್ಕøತಿಗಳ ಮಹತ್ವ, ಮೌಲ್ಯಗಳು ವಿದೇಶದಲ್ಲಿದ್ದಾಗ ಹೆಚ್ಚು ಹೃದಯಕ್ಕೆ ಹತ್ತಿರವಾಗುತ್ತದೆ. ಕಯ್ಯಾರರಂತಹ ಸಾಧಕರ ಪ್ರೇರಣದಾಯಿ ಬರಹಗಳು ಜನರ ಉಸಿರಾದಾಗ ನಾಡು ಸುಭಿಕ್ಷವಾಗುತ್ತದೆ ಎಂದರು.

ಈ ಸಂದರ್ಭ  ಶಿವಾನಂದ ಕೋಟ್ಯಾನ್ ಕಟಪಾಡಿ ಇವರು ರಚಿಸಿದ 'ಪರಂಪರೆಯ ಪಯಣ' ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಬಿಡುಗಡೆಗೊಳಿಸಿದರು.  ಡಾ. ಪ್ರಸನ್ನ ರೈ ಕಲ್ಲಕಳಿಯ ಇವರು ಕಯ್ಯಾರರ ಹಾಡುಗಳ ಗಾಯನ ನಡೆಸಿದರು. 

ಕಯ್ಯಾರು ಚರ್ಚಿನ ಧರ್ಮಗುರು ರೆ.ಫಾ. ವಿಶಾಲ್ ಮೋನಿಶ್, ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನಿಸ ಸಲೀಂ, ಜಿ.ಪಂ.ಸದಸ್ಯ ಸೋಮಶೇಖರ ಜೆ.ಎಸ್, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ  ಕಿಶೋರ್ ಕುಮಾರ್ ಬೊಟ್ಯಾಡಿ, ಮಂಜೇಶ್ವರ ಬ್ಲಾಕ್ ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಮೋಹನ್ ರೈ, ಸದಸ್ಯೆ ಚಂದ್ರಾವತಿ ಶೆಟ್ಟಿ, ಪೈವಳಿಕೆ ಗ್ರಾ.ಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀನಾ ಝಡ್.ಎ.ಕಯ್ಯಾರ್, ಪೈವಳಿಕೆ ಗ್ರಾಪಂ ಸದಸ್ಯೆ ಪ್ರಿನ್ಸಿ ಡಿ'ಸೋಜಾ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿದ್ದರು. 

ಸಾಮಾಜಿಕ ಕಾರ್ಯಕರ್ತ ದೀಪಕ್ ವಿ.ಕೆ, ಜಾನಪದ ಕಲಾವಿದ ಸೋಮಯ್ಯ ಅಶ್ವತ್ಥಕಟ್ಟೆ, ಪ್ರಗತಿಪರ ಕೃಷಿಕ ರಾಮಣ್ಣ ಅತ್ತಾರ್, ನಾಟಿ ವೈದ್ಯ ಮೊಹಮ್ಮದ್ ಪರಂಬಳ ಇವರಿಗೆ ಗೌರವಾರ್ಪಣೆ ನಡೆಯಿತು. 

ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ,  ಕರ್ನಾಟಕ ಗಮಕ ಕಲಾಪರಿಷತ್ತು, ಕಾಸರಗೋಡು ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್, ಮಂಜೇಶ್ವರ ಬ್ಲಾಕ್ ಪಂ.ಮಾಜಿ ಸದಸ್ಯರಾದ ಬೇಬಿ ಶೆಟ್ಟಿ, ಪ್ರಸಾದ್ ರೈ ಕಯ್ಯಾರ್, ಕಾಮಿಲ್ ಅಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಮೊಯ್ದೀನ್ ಕುಂಞÂ್ಞ ಮಾಸ್ತರ್ ಉಪಸ್ಥಿತರಿದ್ದರು. 

ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿ, ಪುರುಷೋತ್ತಮ ಭಟ್.ಕೆ. ವಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ನಿರೂಪಿಸಿದರು.

ನಾಡಗೀತೆ, ಕನ್ನಡ ಗೀತೆಗಳ ಗಾಯನ, ಸಮೂಹ ಶಾಸ್ತ್ರೀಯ ಭರತನಾಟ್ಯ, ಕಥಕ್ ನೃತ್ಯ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ ಪ್ರದರ್ಶನಗೊಂಡಿತು. ಗ್ರೀನ್ ಸ್ಟಾರ್ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್ ಕಯ್ಯಾರು, ಕೊಕ್ಕಚಾಲ್ ಫ್ರೆಂಡ್ಸ್ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್, ಫ್ರೆಂಡ್ಸ್ ಕಯ್ಯಾರು, ಮುಂಡತ್ತಾಯ ಯುವಕವೃಂದ ಕಯ್ಯಾರು, ಲಿಟ್ಲ್ ಬ್ರದರ್ಸ್ ಕೊಕ್ಕಚಾಲ್, ನೇತಾಜಿ ಫ್ರೆಂಡ್ಸ್ ಅಶ್ವತ್ಥಕಟ್ಟೆ, ಕುಟುಂಬಶ್ರೀ ಘಟಕಗಳು ಸಹಕಾರ ನೀಡಿದ್ದವು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries