ಕಾಸರಗೋಡು: ಕಣಜದ ಹುಳ ದಾಳಿಯಿಂದಾಗಿ ಗಂಭೀರ ಗಾಯಗೊಂಡು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ಎರಿಞÂಪ್ಪುಳ ಮಲಾಂಕಡವು ನಿವಾಸಿ ಕೊಟ್ಟನ್-ಚೋಯಿಚ್ಚಿ ದಂಪತಿ ಪುತ್ರಿ ಹಾಗೂ ತಾನದಮನೆ ನಿವಾಸಿ ಟಿ. ನಾರಾಯಣಿ (77) ಮೃತಪಟ್ಟವರು. ಕೃಷಿ ಕಾರ್ಮಿಕರಾಗಿದ್ದ ಇವರು, ಜೂನ್ 19 ರಂದು ಮನೆ ವಠಾರದಲ್ಲಿ ನಾರಾಯಣಿ ಅವರಿಗೆ ಕಣಜದ ಹುಳ ದಾಳಿ ನಡೆಸಿದ ಪರಿಣಾಂ ಗಂಭೀರ ಗಾಯಗೊಂಡಿದ್ದು, ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

