ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಂಗಡಿಯಲ್ಲಿ ಸ್ಕೂಟರಲ್ಲಿ ಆಗಮಿಸಿದ ತಂಡವೊಂದು ದಾರಿ ಕೇಳುವ ನೆಪದಲ್ಲಿ ಮಹಿಳೆಯ ಕತ್ತಿನಿಂದ ಎರಡೂ ಕಾಲು ಪವನ್ ಚಿನ್ನದ ಸರ ಕಸಿದು ಪರಾರಿಯಾಗಿದೆ.
ಹೊಸಂಗಡಿ ರಾಷ್ಟ್ರೀಯಹೆದ್ದಾರಿಯ ಸರ್ವೀಸ್ ರೋಡಿನ ಎಸ್. ಬಿ. ಐ ಬೇಂಕ್ ಬಳಿ ಘಟನೆ. ಪೈವಳಿಕೆ ಬಾಯಿಕಟ್ಟೆ ನಿವಾಸಿ ಎ. ನಯನಾ (30) ಅವರು ರಸ್ತೆಬದಿ ನಡೆದುಹೋಗುತ್ತಿರುವ ಮಧ್ಯೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಸ್ಕೂಟರ್‍ನಲ್ಲಿ ರೈನ್ ಕೋಟು, ಹೆಲ್ಮೆಟ್ ತೊಟ್ಟು ಆಗಮಿಸಿದ್ದ ಇಬ್ಬರು ದಾರಿಕೇಳುವ ಕೇಳುವ ನೆಪದಲ್ಲಿ ಸನಿಹ ಆಗಮಿಸಿ, ಕತ್ತಿಗೆ ಕೈಹಾಕಿ ಚಿನ್ನದ ಸರ ಎಳೆದೊಯ್ದು ಪರಾರಿಯಾಗಿದ್ದಾರೆ. ಮಂಜೇಶ್ವರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಾಧಿಗಳ ಪತ್ತೆಗಾಗಿ ಹೆದ್ದಾರಿಯ ಸಿಸಿ ಟಿವಿ ದೃಶ್ಯಾವಳಿ ತಪಾಸಣೆ ನಡೆಸಲಾಗುತ್ತಿದ್ದು, ಜ್ಯುವೆಲ್ಲರಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

%20(3).jpeg)
