HEALTH TIPS

ಬಾರ ಶಾಲಾ ವಠಾರದಲ್ಲಿ ಕಾಡುಕೋಣಗಳ ಹಾವಳಿ-ಭೀತಿಯಲ್ಲಿ ಜನತೆ

ಕಾಸರಗೋಡು: ಉದುಮ ಪಂಚಾಯಿತಿಯ ಬಾರ ಹಾಗೂ ಆಸುಪಾಸು ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಜನತೆ ಭೀತಿಯಲ್ಲಿ ಕಾಲಕಳೆಯುವಂತಾಗಿದೆ. ಸೋಮವಾರ ಬೆಳಗ್ಗೆ ಮೂರು ದೊಡ್ಡ ಗಾತ್ರದ ಕಾಡುಕೋಣಗಳು  ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿದ್ದು, ಜನರು ಬೊಬ್ಬಿಡುತ್ತಿದ್ದಂತೆ ಒಂದು ಬಾರ ಬಂಡಾರ್‍ಕಾವ್ ಪರಿಸರಕ್ಕೂ, ಎರಡು ವೆಡಿಕುನ್ನು, ಬಾರ ಶಾಲೆ ಪರಿಸರಕ್ಕೂ ಪರಾರಿಯಾಗಿವೆ.   

ಕಾಡುಕೋಣಗಳು ಗುಂಪಾಗಿ ಊರಿಗೆ ತಲುಪಿರುವುದು ಶಾಲಾ ವಿದ್ಯಾರ್ಥಿಗಳು, ವೃದ್ಧರು ಹಾಗೂ ಮಹಿಳೆಯರಲ್ಲಿ ಭೀತಿಗೆ ಕಾರಣವಾಗಿದ್ದು,  ಶಾಲೆಗೆ ನಡೆದುಹೋಗುವ ಮಕ್ಕಳನ್ನು ವಾಹನಗಳಲ್ಲಿ ಶಾಲೆಗೆ ತಲುಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪ್ರಸಕ್ತ ಎರಡು ಕಾಡುಕೋಣಗಳು  ಬಾರ ಶಾಲೆ ಸಮೀಪ ಇರುವುದಾಗಿ ಸ್ಥಳೀಯರು ತಿಳಿಸಿದ್ದು, ಪೆÇಲೀಸರು ಸ್ಥಳಕ್ಕಾಗಮಿಸಿದ್ದು, ಇವುಗಳನ್ನು ಕಾಡಿಗೆ ಓಡಿಸುವ ಕೆಲಸದಲ್ಲಿ ಸ್ಥಳೀಯರು ತೊಡಗಿದ್ದಾರೆ. ಕೆಲವು ದಿನದ ಹಿಂದೆ ಕರಿಚ್ಚೇರಿ, ತೂವಕದಲ್ಲೂ ಕಾಡುಕೋಣಗಳು ಕಾಣಿಸಿಕೊಂಡಿರುವುದಾಗಿ ಳೀಯರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries