HEALTH TIPS

ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟುವರೇ ಅಣ್ಣಾಮಲೈ? ಹರಿದಾಡುತ್ತಿವೆ ಪೋಸ್ಟರ್‌ಗಳು

 ಚೆನ್ನೈ: 'ನಿರ್ಭೀತ ಮನಸ್ಸುಗಳಿಗೆ ಯಾವುದೇ ಮಿತಿಯಿಲ್ಲ'

- ಕೆ.ಅಣ್ಣಾಮಲೈ ಫೋಟೊ ಜೊತೆಗೆ ಈ ರೀತಿ ಬರೆಯಲಾದ ಪೋಸ್ಟರ್‌ಗಳನ್ನು ಕೊಯಮತ್ತೂರಿನಾದ್ಯಂತ ಅಂಟಿಸಲಾಗಿದೆ. ಇದರೊಂದಿಗೆ, ನಿವೃತ್ತ ಐಪಿಎಸ್‌ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ಊಹಾಪೋಹ ಶುರುವಾಗಿದೆ. 


ಕೊಯಮತ್ತೂರಿನಲ್ಲಿ ತಮಿಳುನಾಡು ಬಿಜೆಪಿಯ ಕೇಂದ್ರ ಸಮಿತಿ ಸಭೆ ನಡೆಯುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ. ವಿಶೇಷವೆಂದರೆ ಅಣ್ಣಾಮಲೈ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಸಭಗೆ ಗೈರಾಗಿರುವುದು ವದಂತಿಗಳಿಗೆ ಉತ್ತೇಜನ ನೀಡಿದೆ.

ಅಭಿಮಾನಿ ಕಲ್ಯಾಣ ಸಂಘಟನೆಯಾಗಿರುವ 'ಅಣ್ಣಾಮಲೈ ಅನ್ಬು ಕೂಟಂ', ಹೊಸ ಸದಸ್ಯರು, ಪದಾಧಿಕಾರಿಗಳನ್ನು ಬರಮಾಡಿಕೊಳ್ಳುತ್ತಿದೆ ಎಂದು ಬೆಂಬಲಿಗರು ಹೇಳಿದ್ದಾರೆ. ಈ ಕುರಿತು ಅಣ್ಣಾಮಲೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹೊಸ ಪಕ್ಷ ಎರಡು ದಿನಗಳಲ್ಲಿ ಸ್ಪಷ್ಟನೆ: ಅಣ್ಣಾಮಲೈ ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ? ನಾಳೆ ರಾಜೀನಾಮೆ ಸಾಧ್ಯತೆ

ಇದರ ನಡುವೆ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮಾಡಿರುವ ಟ್ವೀಟ್‌, ಚರ್ಚೆ ಹುಟ್ಟುಹಾಕಿದೆ. 'ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯಿಸುತ್ತಿದೆ. ಕಸರತ್ತು ವೇಗ ಪಡೆದಿದೆ' ಎಂದು ಅವರು ಬರೆದುಕೊಂಡಿದ್ದಾರೆ.

ಹೊಸ ಪಕ್ಷ ಕುರಿತ ಸುದ್ದಿ ಹರಿದಾಡುತ್ತಿದ್ದಂತೆ ಅಣ್ಣಾಮಲೈ ಅವರು, ಈ ಕುರಿತು ಚರ್ಚಸಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಣ್ಣಾಮಲೈಗಿದೆ ಅಸಮಾಧಾನ

ಅಣ್ಣಾಮಲೈ ಅವರು ಕೇಂದ್ರದ ತ್ರಿಭಾಷಾ ನೀತಿ ಕುರಿತು ಕಳೆದವಾರವಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು. 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳನ್ನು ಕಡ್ಡಾಯಗೊಳಿಸುವುದಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕು. 2029-30 ಶೈಕ್ಷಣಿಕ ವರ್ಷದಿಂದ ನಿಯಮವನ್ನು ಜಾರಿಗೆ ತರುವ ತನ್ನ ಹಿಂದಿನ ನಿರ್ಧಾರಕ್ಕೆ ಬದ್ಧವಾಗಿರಬೇಕು ಎಂದು ಒತ್ತಾಯಿಸಿದ್ದರು.

ಇದೊಂದೇ ವಿಚಾರವಲ್ಲ. ಅಣ್ಣಾಮಲೈ ಅವರಿಗೆ ಬಿಜೆಪಿ ನಾಯಕತ್ವದೊಂದಿಗೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದೆ.

ಎಐಎಡಿಎಂಕೆ ವಿರುದ್ಧದ ನಿಲುವು ಅಣ್ಣಾಮಲೈ ಅವರದ್ದು. ತಮಿಳುನಾಡಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಿಗಿರುವ ಅವರು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಸಿ.ನ್‌. ಅಣ್ಣಾದುರೈ ಹಾಗೂ ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ ವಿರುದ್ಧ ಅವರು ನಿರಂತರವಾಗಿ ವಾಗ್ದಾಳಿ ನಡೆಸಿದ್ದಾರೆ.

ಆದರೆ, 206ರ ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆ ಜೊತೆ ಕೈಜೋಡಿಸಿದ್ದ ಬಿಜೆಪಿ, ಆ ಪಕ್ಷದ ಒತ್ತಾಯದ ಮೇರೆಗೆ ಅಣ್ಣಾಮಲೈ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು. ಇದು, ಅಣ್ಣಾಮಲೈ ಹಾಗೂ ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಷ್ಟಲ್ಲದೆ, ಇದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಅವರಿಗೆ ಟಿಕೆಟ್‌ ನೀಡಿರಲಿಲ್ಲ. ಇದು ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿತ್ತು.

'ಅಣ್ಣಾಮಲೈ ಅನ್ಬು ಕೂಟಂ' ಸದಸ್ಯರ ಚಟುವಟಿಕೆಗಳು, ಪೋಸ್ಟರ್‌ ಅಭಿಯಾನವು ಅಣ್ಣಾಮಲೈ ಅವರ ಭವಿಷ್ಯದ ನಿರ್ಧಾರಗಳನ್ನು ಸೂಚಿಸುತ್ತಿದೆಯೇ ಅಥವಾ ಇವೆಲ್ಲ ಅಭಿಮಾನಿಗಳ ಕೆಲಸವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ವಿಚಾರಗಳ ಬಗ್ಗೆ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries