ಸಮರಸ ಚಿತ್ರಸುದ್ದಿ: ಕಾಸರಗೋಡು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾ(ಎಡಿಎಂ)ಕೆ.ವಿ ಶ್ರುತಿ ಸಸಿ ನಡುವ ಮೂಲಕ ಉದ್ಘಾಟಿಸಿದರು. ಸಹಾಯಕ ಜಿಲ್ಲಾಧಿಕಾರಿಗಳಾದ ವಿ.ಪಿ.ರಘುಮಣಿ, ಲಿಪು ಎಸ್.ಲಾರೆನ್ಸ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಹಿರಿಯ ಅಧೀಕ್ಷಕ ರಮೇಶನ ಪೆÇಯಿನಾಚಿ, ಕಿರಿಯ ಅಧೀಕ್ಷಕ ಎಂ.ಬಿ ಲೋಕೇಶ್ ಆಚಾರ್ಯ, ಸಿಬ್ಬಂದಿ ಅನೂಪ್, ಜಯರಾಜ್, ರಮ್ಯಾ, ಬೀನಾ, ಗಿರಿಜಾ ಮೊದಲಾದವರು ಉಪಸ್ಥಿತರಿದ್ದರು.


