ನವದೆಹಲಿ: ಗೃಹ ಬಳಕೆಯ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ದರವನ್ನು ₹29ರಷ್ಟು ಶನಿವಾರ ಏರಿಕೆ ಮಾಡಲಾಗಿದೆ.ಪರಿಷ್ಕೃತ ದರ ಇಂದಿನಿಂದಲೇ (ಭಾನುವಾರ) ಜಾರಿಗೆ ಬಂದಿದೆ.
ಇದರೊಂದಿಗೆ ತೈಲ ಮಾರಾಟ ಕಂಪನಿಗಳು ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ದರ ಹೆಚ್ಚಳ ಮಾಡಿದಂತಾಗಿದೆ.
ಈ ಹಿಂದೆ ಮಾರ್ಚ್ 7ರಂದು ₹60ರಷ್ಟು ಏರಿಕೆಯಾಗಿತ್ತು.
ದೇಶದ ಪ್ರಮುಖ ನಗರಗಳಲ್ಲಿ 14.2 ಕೆ.ಜಿ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕೃತ ದರಗಳು ಹೀಗಿವೆ:
ಸರ್ಕಾರಿ ಸ್ವಾಮ್ಯದ ತೈಪೋತ್ಪನ್ನ ಮಾರಾಟ ಕಂಪನಿಗಳ ನಷ್ಟವನ್ನು ಸರಿದೂಗಿಸಲು ಈ ಹಿಂದೆ ಮಾರ್ಚ್ 7 ರಂದು ಸಿಲಿಂಡರ್ ಬೆಲೆಯನ್ನು ₹60 ಹೆಚ್ಚಿಸಲಾಗಿತ್ತು.

